ಕಾವೇರಿ ನದಿಯಲ್ಲಿ ದುರಂತ: ಮೊಮ್ಮಕ್ಕಳನ್ನು ರಕ್ಷಿಸಲು ಹೋಗಿ ತಾತ ಸೇರಿ ಮೂವರು ಜಲಸಮಾಧಿ
ಕಾವೇರಿ ನದಿಯಲ್ಲಿ ಘೋರ ದುರಂತವೊಂದು ನಡೆದಿದ್ದು ಇಬ್ಬರು ಮೊಮ್ಮಕ್ಕಳು ಮತ್ತು ತಾತ ಜಲಸಮಾಧಿಯಾಗಿದ್ದಾರೆ. ಮೈಸೂರಿನ ಜಿಲ್ಲೆಯ ಟಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.

ಮೈಸೂರು: ಕಾವೇರಿ ನದಿಯಲ್ಲಿ ಘೋರ ದುರಂತವೊಂದು ನಡೆದಿದ್ದು ಇಬ್ಬರು ಮೊಮ್ಮಕ್ಕಳು ಮತ್ತು ತಾತ ಜಲಸಮಾಧಿಯಾಗಿದ್ದಾರೆ. ಮೈಸೂರಿನ ಜಿಲ್ಲೆಯ ಟಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ. ಮೃತರನ್ನು ತಿರುಮಕೂಡಲಿನ ನಿವಾಸಿಗಳಾದ 70 ವರ್ಷದ ಚೌಡಯ್ಯ, 13 ವರ್ಷದ ಭರತ್ ಮತ್ತು 10 ವರ್ಷದ ಧನುಷ್ ಎಂದು ಗುರುತಿಸಲಾಗಿದೆ. ನದಿ ನೀರಿನಲ್ಲಿ ಮುಳುಗುತ್ತಿದ್ದ ಮೊಮ್ಮಕ್ಕಳ ರಕ್ಷಣೆಗೆ ಚೌಡಯ್ಯ ಇಳಿದಿದ್ದರು. ಆದರೆ ಇಬ್ಬರು ಮೊಮ್ಮಕ್ಕಳ ಜೊತೆಗೆ ಚೌಡಯ್ಯ ಕೂಡ ನೀರುಪಾಲಾಗಿದ್ದಾರೆ. ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದ್ದು, ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



