ಮೂವರು ನೀರುಪಾಲು

ಯಾದಗಿರಿ: ಕ್ವಾರಿಯಲ್ಲಿ ಬಟ್ಟೆ ತೊಳೆಯುವಾಗ ಕಾಲು ಜಾರಿ ಇಬ್ಬರು ಬಾಲಕಿಯರು ಸೇರಿ ಮೂವರು ಸಾವು
ಯಾದಗಿರಿಯ ವಡಗೇರ ತಾಲೂಕಿನ ಬಸವನಗರ ಬಳಿಯಲ್ಲಿರುವ ಕ್ವಾರಿಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿಬಿದ್ದು ಇಬ್ಬರು ಬಾಲಕಿಯರೂ ಸೇರಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ವಿಜಯಪುರ: ಪ್ರವಾಸಕ್ಕೆ ತೆರಳಿದ್ದ ಮುಸ್ಲಿಂ ಕುಟುಂಬ; ಭೂತನಾಳ ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಮೂವರು ಸಾವು!
ವಿಜಯಪುರದ ಐತಿಹಾಸಿಕ ಸ್ಥಳಗಳನ್ನು ನೋಡಲು ಬೆಂಗಳೂರಿನ ಆರ್.ಟಿ. ನಗರದಿಂದ 14 ಜನರ ತಂಡ ಪ್ರವಾಸಕ್ಕೆ ತೆರಲಿದ್ದು ಈ ವೇಳೆ ಪ್ರಸಿದ್ಧ ಭೂತನಾಳ ಕೆರೆಯಲ್ಲಿ ಈಜಲು ಹೋದ ಮೂವರು ದುರಂತ ಅಂತ್ಯ ಕಂಡಿದ್ದಾರೆ.

ರಂಜಾನ್ ದುರಂತ: ಚಿಕ್ಕಬಳ್ಳಾಪುರದಲ್ಲಿ ಮಗುವನ್ನು ರಕ್ಷಿಸಲು ಹೋಗಿ ಮೂವರು ನೀರುಪಾಲು!
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ನಡೆದಿದೆ.

ಕಾವೇರಿ ನದಿಯಲ್ಲಿ ದುರಂತ: ಮೊಮ್ಮಕ್ಕಳನ್ನು ರಕ್ಷಿಸಲು ಹೋಗಿ ತಾತ ಸೇರಿ ಮೂವರು ಜಲಸಮಾಧಿ
ಕಾವೇರಿ ನದಿಯಲ್ಲಿ ಘೋರ ದುರಂತವೊಂದು ನಡೆದಿದ್ದು ಇಬ್ಬರು ಮೊಮ್ಮಕ್ಕಳು ಮತ್ತು ತಾತ ಜಲಸಮಾಧಿಯಾಗಿದ್ದಾರೆ. ಮೈಸೂರಿನ ಜಿಲ್ಲೆಯ ಟಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.

ತುಮಕೂರು: ಕೆರೆಗೆ ಹಾರಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಮೃತರನ್ನು 25 ವರ್ಷದ ಹಸೀನಾ ಮಕ್ಕಳಾದ 9 ವರ್ಷದ ಅಸೀಮಾ ಹಾಗೂ 3 ಆಲ್ಮಿಸಾ ಕೂಯಿಲ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಗಣೇಶ ವಿಸರ್ಜನೆ ವೇಳೆ ದುರಂತ: ತಂದೆ-ಮಗ ಸೇರಿ ಮೂವರು ಗಣೇಶ ಮೂರ್ತಿ ಜೊತೆ ಜಲಸಮಾಧಿ!
ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳಿಗೆ ಶೋಧ ನಡೆಸಿದ್ದಾರೆ.

ಚಾಮರಾಜನಗರ: ಜಲಾಶಯದಲ್ಲಿ ಮುಳುಗುತ್ತಿದ್ದ ತಾಯಿಯನ್ನು ರಕ್ಷಿಸಲು ಹೋದ ಮಕ್ಕಳಿಬ್ಬರು ಸೇರಿ ಮೂವರು ಜಲಸಮಾಧಿ
ಗೋಪಿನಾಥಂ ಜಲಾಶಯದಲ್ಲಿ ಬಟ್ಟೆ ತೊಳೆಯಲು ಹೋಗಿ ಮೂವರು ನೀರುಪಾಲಾದ ದಾರುಣ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ತಮಿಳುನಾಡು: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಒಂದೇ ಕುಟುಂಬದ ಮೂವರು ನೀರು ಪಾಲು
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಚೆಂಗಲ್ಪಟುವಿನ ಪಾಲಾರ್ ನದಿಯಲ್ಲಿ ಒಂದೇ ಕುಟುಂಬದ ಮೂವರು ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ.

