ರಾಜ್ಯ

ಮದುವೆಯಾದಾಗ ನೀನು ಸುಂದರವಾಗಿದ್ದೆ, ಈಗ ದಪ್ಪ ಆಗಿದೀಯ: ಪತ್ನಿಗೆ ಪತಿ ಕಿರುಕುಳ-ಹಲ್ಲೆ, ಪ್ರಕರಣ ದಾಖಲು

ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರಮ್ಯಶ್ರೀ 2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಆಂಧ್ರ ಪ್ರದೇಶ ಪ್ರಕಾಶಂ ಜಿಲ್ಲೆ ಮೂಲದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ಎಂಬುವವರನ್ನ ಪರಿಚಯಿಸಿಕೊಂಡು ಇಬ್ಬರು ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ.

ಮದುವೆಯಾದಾಗ ನೀನು ಸುಂದರವಾಗಿದ್ದೆ, ಈಗ ದಪ್ಪ ಆಗಿದೀಯ: ಪತ್ನಿಗೆ ಪತಿ ಕಿರುಕುಳ-ಹಲ್ಲೆ, ಪ್ರಕರಣ ದಾಖಲು
ಸಂಗ್ರಹ ಚಿತ್ರ
Published On :

ಬೆಂಗಳೂರು: ಮದುವೆಯಾದಾಗ ಸುಂದರವಾಗಿದ್ದೆ, ಈಗ ದಪ್ಪ ಆಗಿದ್ದೀಯ ಎಂದು ಪತ್ನಿಯ ಸೌಂದರ್ಯದ ವಿಚಾರಕ್ಕೆ ಪದೇ ಪದೇ ಗಲಾಟೆ ಮಾಡುತ್ತಿದ್ದ ಪತಿಯೊಬ್ಬ ಆಕೆಯ ಮೇಲೆ, ಹಾಗೂ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರಮ್ಯಶ್ರೀ 2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಆಂಧ್ರ ಪ್ರದೇಶ ಪ್ರಕಾಶಂ ಜಿಲ್ಲೆ ಮೂಲದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ಎಂಬುವವರನ್ನ ಪರಿಚಯಿಸಿಕೊಂಡು ಇಬ್ಬರು ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ.

ಮಾ. 6 ರಂದು 3 ಲಕ್ಷ ತುರ್ತು ಹಣ ಬೇಕಿದೆ, ನಿಮ್ಮ ತಂದೆಯಿಂದ ಕೊಡಿಸುವಂತೆ ಸಾಯಿಕುಮಾರ್ ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದಕ್ಕೆ ತನ್ನೊಂದಿಗೆ ಜಗಳವಾಡಿದ್ದ. ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಚಾಕು ತೋರಿಸಿ ಬೆದರಿಸಿದ್ದ. ಭಯಪಟ್ಟು ಜೋರಾಗಿ ಕಿರುಚಿಕೊಂಡಿದ್ದು, ಮನೆಯಲ್ಲಿ ತಂದೆ ಮಧ್ಯಪ್ರವೇಶಿಸಿದಾಗ ಅಡುಗೆಮನೆಯಲ್ಲಿದ್ದ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

ಎರಡು ವರ್ಷದಿಂದ ಹಣ ಹಾಗೂ ಸೌಂದರ್ಯದ ವಿಚಾರದಕ್ಕೆ ಆಗಾಗೆ ಜಗಳ ಮಾಡುತ್ತಿದ್ದು, ಈ ವೇಳೆ ಕೈಯಿಂದ ಹೊಡೆದು ಗಾಯ ಮಾಡಿದ್ದ, ಈ ಸಂಬಂಧ 2023ರಲ್ಲಿ ಆರ್. ಆರ್ ನಗರ ಪೊಲೀಸರಿಗೆ ದೂರು ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.