ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ: ಸಚಿವ ಮಧು ಬಂಗಾರಪ್
ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು.

ಶಿವಮೊಗ್ಗ: ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು ಎಂದು ಹೇಳಿದರು.
ಬೇರೆ ರಾಜ್ಯದ ಮಕ್ಕಳು ಎಂಟನೇ ತರಗತಿಗೆ ವರ್ಗಾವಣೆ ಆಗಿ ಇಲ್ಲಿಗೆ ಬರುತ್ತಾರೆ. ಅವರ ಜೀವನದಲ್ಲೇ ಕನ್ನಡ ಕಲಿತಿರುವುದಿಲ್ಲ. ಅವರಿಗೆ ಒಂದೇ ಬಾರಿ ಕನ್ನಡ ಕಲಿಯಿರಿ ಎಂದರೆ ಆಗುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕು. ಇದು ಸೂಕ್ಷ್ಮ ವಿಚಾರ. ಪಾಲಿಸಿ ಮಾಡುವಾಗ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾಡುತ್ತೇವೆ. ಎಸ್‌ಇಪಿ ಬರುವುದರಿಂದ ನೋಡಿಕೊಂಡು ಮಾಡುತ್ತೇವೆ ಎಂದು ತಿಳಿಸಿದರು,
ಎನ್ಇಪಿ ಹಾಗೂ ಎಸ್‌ಇಪಿ ಬಗ್ಗೆ ಗೂಂದಲವಿದೆ. ನಾವು ಎಸ್‌ಇಪಿ ಅಂತ ಕೇಳುತ್ತಿದ್ದೇವೆ. ಈಗ ಮೊದಲಿನಂತೆ ಕಲಿಕೆ ಇರಲಿದೆ. ಬೇರೆ ಭಾಷೆ ಹೇರಿಕೆಯ ಕುರಿತು ನಾವು ಹುಷಾರಾಗಿರಬೇಕಾಗುತ್ತದೆ. ಕನ್ನಡವನ್ನು ಬಡವಾಗಲು ಈಗ ಅಲ್ಲ ಮುಂದೂ ಸಹ ಬಿಡುವುದಿಲ್ಲ. ಇದೆಲ್ಲಾ ತಾಂತ್ರಿಕವಾಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



