ರಾಜ್ಯ

ಧರ್ಮಸ್ಥಳ ಪ್ರಕರಣ: ಸಾಕ್ಷಿ-ದೂರುದಾರ ಗುರುತಿಸಿದ ಎರಡನೇ ಸ್ಥಳದಲ್ಲಿ ಶವ ಹೊರತೆಗೆಯುವ ಕಾರ್ಯ ಆರಂಭ

ಮೊದಲ ಸ್ಥಳದಲ್ಲಿ ಶೋಧಕಾರ್ಯ ಪೂರ್ಣಗೊಂಡಿದೆ. ದೂರುದಾರರಿಗೆ ಮೊದಲ ಸ್ಥಳದ ಬಗ್ಗೆ ಖಚಿತತೆ ಇಲ್ಲ ಮತ್ತು ನಿರ್ದಿಷ್ಟ ಸ್ಥಳದ ಬದಲಿಗೆ ಅವರು ನಮಗೆ ದೊಡ್ಡ ಪ್ರದೇಶವನ್ನು ತೋರಿಸುತ್ತಿದ್ದಾರೆ. ಆದ್ದರಿಂದ, ಮೊದಲ ಸ್ಥಳದಲ್ಲಿ ಎಲ್ಲೆಂದರಲ್ಲಿ ಅಗೆಯಲಾಗಿದೆ.

ಧರ್ಮಸ್ಥಳ ಪ್ರಕರಣ: ಸಾಕ್ಷಿ-ದೂರುದಾರ ಗುರುತಿಸಿದ ಎರಡನೇ ಸ್ಥಳದಲ್ಲಿ ಶವ ಹೊರತೆಗೆಯುವ ಕಾರ್ಯ ಆರಂಭ
ಸಾಕ್ಷಿ ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಎರಡನೇ ಸ್ಥಳ
Published On :

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಸಾಕ್ಷಿ-ದೂರುದಾರ ಗುರುತಿಸಿದ 13 ಸ್ಥಳಗಳ ಪೈಕಿ ಎರಡನೇ ಸ್ಥಳಕ್ಕೆ ತೆರಳಿದ್ದು, ಸಮಾಧಿಯನ್ನು ಅಗೆಯಲು ಪ್ರಾರಂಭಿಸಿದೆ.

ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಅರಣ್ಯ ಪ್ರದೇಶದೊಳಗಿನ ಸಣ್ಣ ಗುಡ್ಡಗಾಡು ಪ್ರದೇಶದಲ್ಲಿ ಎರಡನೇ ಸ್ಥಳವಿದ್ದು, ಕಾರ್ಮಿಕರಿಂದ ನೆಲವನ್ನು ಅಗೆಸಲಾಗುತ್ತಿದೆ. ಅಗೆಯಲು ನಾವು ಯಂತ್ರೋಪಕರಣಗಳನ್ನು ಬಳಸುವುದಿಲ್ಲ ಎಂದು ತನಿಖಾ ತಂಡದ ಅಧಿಕಾರಿ TNIE ಗೆ ತಿಳಿಸಿದರು.

'ಮೊದಲ ಸ್ಥಳದಲ್ಲಿ ಶೋಧಕಾರ್ಯ ಪೂರ್ಣಗೊಂಡಿದೆ. ದೂರುದಾರರಿಗೆ ಮೊದಲ ಸ್ಥಳದ ಬಗ್ಗೆ ಖಚಿತತೆ ಇಲ್ಲ ಮತ್ತು ನಿರ್ದಿಷ್ಟ ಸ್ಥಳದ ಬದಲಿಗೆ ಅವರು ನಮಗೆ ದೊಡ್ಡ ಪ್ರದೇಶವನ್ನು ತೋರಿಸುತ್ತಿದ್ದಾರೆ. ಆದ್ದರಿಂದ, ಮೊದಲ ಸ್ಥಳದಲ್ಲಿ ಎಲ್ಲೆಂದರಲ್ಲಿ ಅಗೆಯಲಾಗಿದೆ. ಆದರೆ, ಏನೂ ಸಿಗಲಿಲ್ಲ. ಹೀಗಾಗಿ, ಅಗೆದಿದ್ದ ಗುಂಡಿಯನ್ನು ಮುಚ್ಚಿದ್ದೇವೆ' ಎಂದು ಅವರು ಹೇಳಿದರು.

ಒಂದು ದಶಕದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದವರ ಶವಗಳನ್ನು ಹೂಳಲು ನನ್ನನ್ನು ಒತ್ತಾಯಿಸಲಾಯಿತು ಎಂದು ಮಾಜಿ ಪೌರ ಕಾರ್ಮಿಕರೊಬ್ಬರು ಆರೋಪಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಜುಲೈ 4 ರಂದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಜುಲೈ 19 ರಂದು ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.