ರಾಜ್ಯ

ಪೀಣ್ಯ ತ್ರಿವಳಿ ಕೊಲೆ ಕೇಸ್'ಗೆ ಟ್ವಿಸ್ಟ್: ಹತ್ಯೆಯಾದ ಮಹಿಳೆ ಹಂತಕನ ಪತ್ನಿಯೇ ಅಲ್ಲ, ಇಬ್ಬರೂ ಲಿವಿಂಗ್ ರಿಲೇಶನ್'ಶಿಪ್ ನಲ್ಲಿದ್ದರು..!

ನೆಲಮಂಗಲ ಮೂಲದ ಆರೋಪಿ ಗಂಗರಾಜು ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ. ಭಾಗ್ಯ ಕೂಡ ಕೌಟುಂಬಿಕ ಕಾರಣಗಳಿಂದ ಪತಿಯನ್ನು ತೊರೆದು ಪುತ್ರಿ ನವ್ಯಾ ಜೊತೆಗೆ ಪ್ರತ್ಯೇಕವಾಗಿ ನೆಲೆಸಿದ್ದಳು.

ಪೀಣ್ಯ ತ್ರಿವಳಿ ಕೊಲೆ ಕೇಸ್'ಗೆ ಟ್ವಿಸ್ಟ್: ಹತ್ಯೆಯಾದ ಮಹಿಳೆ ಹಂತಕನ ಪತ್ನಿಯೇ ಅಲ್ಲ, ಇಬ್ಬರೂ ಲಿವಿಂಗ್ ರಿಲೇಶನ್'ಶಿಪ್ ನಲ್ಲಿದ್ದರು..!
ಹಂತಕ ಹಾಗೂ ಹತ್ಯೆಯಾದ ಮೂವರು.
Published On :

ಬೆಂಗಳೂರು: ಪೀಣ್ಯದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹತ್ಯೆಯಾದ ಮಹಿಳೆ ಆರೋಪಿ ಗಂಗರಾಜು ಪತ್ನಿಯೇ ಅಲ್ಲ, ಇಬ್ಬರೂ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು ಎಂಬುದು ಇದೀಗ ಬಹಿರಂಗಗೊಂಡಿದೆ.

ನೆಲಮಂಗಲ ಮೂಲದ ಆರೋಪಿ ಗಂಗರಾಜು ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ. ಭಾಗ್ಯ ಕೂಡ ಕೌಟುಂಬಿಕ ಕಾರಣಗಳಿಂದ ಪತಿಯನ್ನು ತೊರೆದು ಪುತ್ರಿ ನವ್ಯಾ ಜೊತೆಗೆ ಪ್ರತ್ಯೇಕವಾಗಿ ನೆಲೆಸಿದ್ದಳು. ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಭಾಗ್ಯ ಅವರಿಗೆ ಗಂಗರಾಜು ಪರಿಚಯವಾಗಿದೆ. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರೂ ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಭಾಗ್ಯ ಅವರ ಪುತ್ರಿ ನವ್ಯಾ ಕೂಡ ಇವರೊಂದಿಗೆ ನೆಲೆಸಿದ್ದಳು. ಭಾಗ್ಯ ಅವರ ಅಕ್ಕನ ಮಗಳಾದ ಹೇಮಾವತಿ ಕೂಡ ಇವರ ಜೊತೆ ನೆಲೆಸಿದ್ದಳು. ಆರೋಪಿ ಸೇರಿ ನಾಲ್ವರೂ ಜಾಲಹಳ್ಳಿ ಕ್ರಾಸ್ ಬಳಿಯ ಚೊಕ್ಕಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಗಂಗರಾಜು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಭಾಗ್ಯ ಗೃಹಿಣಿಯಾಗಿದ್ದು, ಪುತ್ರಿ ನವ್ಯಾ ಪ್ರಥಮ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದಳು. ಅಕ್ಕನ ಮಗಳಾದ ಹೇಮಾವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಂಗರಾಜುಗೆ ಭಾಗ್ಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಈ ವೇಳೆ ನವ್ಯಾ ಹಾಗೂ ಹೇಮಾವತಿ ಭಾಗ್ಯ ಪರವಾಗಿ ಮಾತನಾಡುತ್ತಿದ್ದರು. ಇದರಿಂದ ಗಂಗರಾಜು ಬೇಸತ್ತಿದ್ದ. ಬುಧವಾರ ಸಂಜೆ ಕೂಡ ಭಾಗ್ಯ ನಡವಳಿಕೆ ಪ್ರಸ್ತಾಪಿಸಿ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಭಾಗ್ಯ ಮೇಲೆ ಹಲ್ಲೆಗೆ ಮುಂದಾಗಿದ್ದ.

ಈ ವೇಳೆ ಮನೆಯಲ್ಲೇ ಇದ್ದ ನವ್ಯಾ ಹಾಗೂ ಹೇಮಾವತಿ ಭಾಗ್ಯಾಳ ಪರ ವಹಿಸಿಕೊಂಡು ಮಾತನಾಡಲು ಮುಂದಾಗಿದ್ದು, ಇದರಿಂದ ರೊಚ್ಚಿಗೆದ್ದು, ಮಚ್ಚು ತೆಗೆದುಕೊಂಡು ಮೂವರ ಮೇಲೆ ಬರ್ಬರವಾಗಿ ಹಲ್ಲೆ ನಡಸಿ, ಹತ್ಯೆ ಮಾಡಿದ್ದಾನೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗರಾಜು ಜಾಲಹಳ್ಳಿ ಕ್ರಾನ'ನ ಚೊಕ್ಕಸಂದ್ರದ ಮನೆಯಲ್ಲಿ ಬುಧವಾರ ಸಂಜೆ ಸುಮಾರು 5 ಗಂಟೆಗೆ ಭಾಗ್ಯ, ಆಕೆಯ ಪುತ್ರಿ ನವ್ಯಾ, ಸಂಬಂಧಿ ಹೇಮಾವತಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದ. ಬಳಿಕ 112ಗೆ ಕರೆ ಮಾಡಿದ್ದ. ಬಳಿಕ ಹತ್ಯೆಗೆ ಬಳಿಸಿದ್ದ ಆಯುಧದೊಂದಿಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.