ಚಿಕ್ಕಬಳ್ಳಾಪುರ: ಗಂಡನಿಗೆ ಪತ್ನಿಯ Private Video ಕಳಿಸಿದ ಮಾಜಿ ಪ್ರಿಯಕರ; ಬೀದಿಗೆ ಬಿದ್ದ ನವವಿವಾಹಿತೆ!
ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದರಿಂದ ಕೋಪಗೊಂಡ ಪ್ರಿಯಕರನೊಬ್ಬ ಮಾಜಿ ಪ್ರಿಯತಮೆಯ ಪತಿಗೆ ಆಕೆಯ ಖಾಸಗಿ ವಿಡಿಯೋವನ್ನು ಕಳುಹಿಸಿದ್ದರ ಪರಿಣಾಮ ನವವಿವಾಹಿತೆಯ ಬದುಕು ಇದೀಗ ಬೀದಿಗೆ ಬಿದ್ದಿದೆ.

ಚಿಕ್ಕಬಳ್ಳಾಪುರ: ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದರಿಂದ ಕೋಪಗೊಂಡ ಪ್ರಿಯಕರನೊಬ್ಬ ಮಾಜಿ ಪ್ರಿಯತಮೆಯ ಪತಿಗೆ ಆಕೆಯ ಖಾಸಗಿ ವಿಡಿಯೋವನ್ನು ಕಳುಹಿಸಿದ್ದರ ಪರಿಣಾಮ ನವವಿವಾಹಿತೆಯ ಬದುಕು ಇದೀಗ ಬೀದಿಗೆ ಬಿದ್ದಿದೆ.
20 ದಿನದ ಹಿಂದೆ ಸಂತ್ರಸ್ತ ಯುವತಿ ಯುವಕನೊಬ್ಬನ ಜೊತೆ ವಿವಾಹವಾಗಿದ್ದಳು. ಮಾಜಿ ಪ್ರಿಯಕರ ಅಂಬರೀಶ್ ಎಂಬಾತ ಪ್ರಿಯತಮೆಯ ಪತಿಗೆ ಪತ್ನಿಯ ಖಾಸಗಿ ವಿಡಿಯೋ ಕಳುಹಿಸಿದ್ದಾನೆ. ತನ್ನ ಪತ್ನಿಯ ಖಾಸಗಿ ವಿಡಿಯೋ ನೋಡುತ್ತಿದ್ದಂತೆ ಪತಿ ಆಕ್ರೋಶಗೊಂಡಿದ್ದು ತಾನೇ ಕಟ್ಟಿದ್ದ ತಾಳಿಯನ್ನು ತೆಗೆದು ತವರು ಮನೆಗೆ ಕಳುಹಿಸಿದ್ದಾನೆ. ಈ ಘಟನೆಯಿಂದ ಆತಂಕಗೊಂಡ ನವವಿವಾಹಿತೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿರುವ ಮಾಜಿ ಪ್ರಿಯಕರ ಅಂಬರೀಶನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಘಟನೆ ಬೆನ್ನಲ್ಲೇ ಅಂಬರೀಶ್ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಅಂಬರೀಶನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಯುವತಿ ಅಂಬರೀಶನಿಂದ ನನ್ನ ಜೀವನ ಹಾಳಾಗಿದೆ. ಆತನೇ ನನ್ನ ಜೀವನವನ್ನು ಸರಿಸಪಡಿಸಬೇಕು. ನನಗೆ ನ್ಯಾಯ ಕೊಡಿಸಿ ಎಂದು ಡಾ. ಬಿಆರ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಯುವತಿ ಪ್ರತಿಭಟನೆ ನಡೆಸುತ್ತಿದ್ದಾಳೆ.
ಆದರೆ ಅಂಬರೀಶ ಯುವತಿಯ ಜೊತೆಗಿದ್ದಾಗ ತೆಗೆದುಕೊಂಡ ಖಾಸಗಿ ವಿಡಿಯೋ ಮತ್ತು ಪೋಟೊಗಳನ್ನ ಆತ ಕಳುಹಿಸಲ್ಲ ಎಂದು ಹೇಳಲಾಗುತ್ತಿದೆ. ಅಂಬರೀಶ್ ಈ ವಿಡಿಯೋ ಹಾಗೂ ಫೋಟೋಗಳನ್ನು ಯುವತಿಯ ಗೆಳತಿ ಸುನಿಲ್ ಎಂಬಾತನಿಗೆ ಕಳುಹಿಸಿದ್ದನಂತೆ. ಸುನೀಲ್ ಆಕೆಯ ಮೇಲಿನ ವೈಯಕ್ತಿಕ ದ್ವೇಷದ ಕಾರಣಕ್ಕೆ ಅವುಗಳನ್ನು ಯುವತಿಯ ಗಂಡನಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



