ಧರ್ಮಸ್ಥಳ ಪ್ರಕರಣ: SIT ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಸೂಚನೆಗಳನ್ನು ನೀಡುವುದಿಲ್ಲ- ಡಾ. ಜಿ ಪರಮೇಶ್ವರ್
ಎಸ್ ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಬೇರೆ ಸಂಸ್ಥೆಗೆ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಫ್ ಎಸ್ ಎಲ್ ಗೆ ಈಗಾಗಲೇ ಒಂದಿಷ್ಟು ಸ್ಯಾಂಪಲ್ ನೀಡಲಾಗಿದೆ.

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ವಿರೋಧ ಪಕ್ಷ ಬಿಜೆಪಿ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಎಸ್ ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಬೇರೆ ಸಂಸ್ಥೆಗೆ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಫ್ ಎಸ್ ಎಲ್ ಗೆ ಈಗಾಗಲೇ ಒಂದಿಷ್ಟು ಸ್ಯಾಂಪಲ್ ನೀಡಲಾಗಿದೆ. ಅದರ ವರದಿ ಏನಿರುತ್ತೆ ಗೊತ್ತಿಲ್ಲ ನಾವು ಊಹಾಪೋಹ ಮಾಡಿ ಮಾತನಾಡಲು ಬರುವುದಿಲ್ಲ ಎಂದರು.
ವಿಪಕ್ಷಗಳು ಬೇಗ ತನಿಖೆ ಮುಗಿಸಿ ಎಂದರೆ ಆಗುವುದಿಲ್ಲ ಸಮಯ ನಿಗದಿ ಮಾಡಿ ತನಿಖೆ ಮಾಡಿ ಎಂದರೆ ಆಗುವುದಿಲ್ಲ ತನಿಖೆ ಬೇಗ ಮುಗಿಸಿ ಎಂದು ಎಸ್ ಐಟಿಗೆ ಹೇಳಲು ಆಗುವುದಿಲ್ಲ . ನಾವು ಎಸ್ ಐಟಿಗೆ ಯಾವುದೇ ನಿರ್ದೇಶನ ಕೊಡಲ್ಲ ಈ ಪ್ರಕರಣ ಎಲ್ಲಿವರೆಗೆ ಹೋಗುತ್ತೆ ಗೊತ್ತಿಲ್ಲ ತಾರ್ಕಿಕ ಅಂತ್ಯ ಆಗಬೇಕು ಅಲ್ಲಿವರೆಗೆ ತನಿಖೆ ಮಾಡತ್ತಾರೆ ಎಂದರು.
ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ, ಅದು ಪೂರ್ಣಗೊಳ್ಳುವವರೆಗೆ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ, ನಾವು ಮಧ್ಯಪ್ರವೇಶಿಸುವುದಿಲ್ಲ ಅಥವಾ ಅವರಿಗೆ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ. ತನಿಖೆ ಶೀಘ್ರದಲ್ಲೇ ಪೂರ್ಣಗೊಂಡರೆ, ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುತ್ತದೆ. ಪ್ರಕರಣವು ತಾರ್ಕಿಕ ಅಂತ್ಯವನ್ನು ತಲುಪುವವರೆಗೆ ಅವರು ತನಿಖೆ ನಡೆಸುತ್ತಾರೆ ಎಂದರು.
ಒಂದು ವಾರದಲ್ಲಿ ಅದನ್ನು ಮುಗಿಸಿ ವರದಿಯನ್ನು ನೀಡಿ" ಎಂದು ನೀವು ಹೇಳಬಹುದಾದ ರೀತಿಯ ವಿಷಯವಲ್ಲ ಇದು. ನಾವು ಸಮಯದ ಚೌಕಟ್ಟನ್ನು ನಿಗದಿಪಡಿಸಲು ಸಾಧ್ಯವಿಲ್ಲ... ಧರ್ಮಸ್ಥಳದ ಧರ್ಮಾಧಿಕಾರಿಯಿಂದ ಹಿಡಿದು ಉಳಿದವರೆಲ್ಲರೂ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



