ಕಂಚಿ ಕಾಮಕೋಟಿ ಪೀಠದ ಕಿರಿಯ ಮಠಾಧೀಶರಾಗಿ ಶ್ರೀ ಶ್ರೀ ಗಣೇಶ ಶರ್ಮಾ ದ್ರಾವಿಡ್ ಸನ್ಯಾಸ ದೀಕ್ಷೆ ಸ್ವೀಕಾರ
ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್‌ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು: ತಮಿಳುನಾಡಿನ ಕಾಂಚೀಪುರಂನಲ್ಲಿ ಶ್ರೀ ದುಡ್ಡು ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯ ಗಣೇಶ ಶರ್ಮ ದ್ರಾವಿಡ್ ಅವರಿಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳು ಅಕ್ಷಯ ತೃತೀಯ ಸಂದರ್ಭದಲ್ಲಿ ಸನ್ಯಾಸ ದೀಕ್ಷೆ ನೀಡಲಿದ್ದಾರೆ ಎಂದು ಕಂಚಿ ಕಾಮಕೋಟಿ ಪೀಠದ ಪ್ರಕಟಣೆ ತಿಳಿಸಿದೆ.
ಕಾಂಚೀಪುರಂನಲ್ಲಿ ಶ್ರೀ ಕಂಚಿ ಕಾಮಕೋಟಿ ಪೀಠವನ್ನು ಸ್ಥಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯರ 2534 ನೇ ಜಯಂತಿ ಮಹೋತ್ಸವ (ಮೇ 2) ರಂದು ಇದೆ ಎಂದು ಪ್ರಕಟಣೆ ತಿಳಿಸಿದೆ.
ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್‌ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರು. 2006 ರಲ್ಲಿ ವೇದಾಧ್ಯಯನ ಆರಂಭಿಸಿದಂದಿನಿಂದ, ಅವರಿಗೆ ಶ್ರೀ ಕಾಂಚಿ ಕಾಮಕೋಟಿ ಪೀಠದ ಶ್ರೀ ಶಂಕರಾಚಾರ್ಯ ಸ್ವಾಮಿಗಳ ಆಶೀರ್ವಾದ ಮತ್ತು ಅನುಗ್ರಹ ದೊರೆತಿದೆ.
ಶ್ರೀ ಗಣೇಶ್ ಶರ್ಮಾ ದ್ರಾವಿಡ್ ಅವರು ಋಗ್ವೇದದ ಜೊತೆಗೆ ಯಜುರ್ವೇದ, ಸಾಮವೇದ, ಷಡಂಗಗಳು, ದಶೋಪನಿಷತ್ತುಗಳನ್ನು ಸಹ ಪೂರ್ಣಗೊಳಿಸಿದ್ದಾರೆ ಮತ್ತು ಶಾಸ್ತ್ರಿ ಅಧ್ಯಯನವನ್ನು ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



