ವಿನೂ ಮಂಕಡ್ ಟ್ರೋಫಿ: ಕರ್ನಾಟಕ ತಂಡದ ನಾಯಕನಾಗಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಆಯ್ಕೆ!
ಅಂಡರ್-19 ಏಕದಿನ ಮಾದರಿಯ ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ 16 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಕರ್ನಾಟಕ ಅಂಡರ್ 19 ತಂಡವನ್ನು ಅನ್ವಯ್ ದ್ರಾವಿಡ್ ಮುನ್ನಡೆಸಲಿದ್ದಾರೆ.

ಬೆಂಗಳೂರು: ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ತಂಡದ ನಾಯಕನಾಗಿ, ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.
ಅಂಡರ್-19 ಏಕದಿನ ಮಾದರಿಯ ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ 16 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಕರ್ನಾಟಕ ಅಂಡರ್ 19 ತಂಡವನ್ನು ಅನ್ವಯ್ ದ್ರಾವಿಡ್ ಮುನ್ನಡೆಸಲಿದ್ದಾರೆ.
ಬಲಗೈ ವಿಕೆಟ್ ಕೀಪರ್-ಬ್ಯಾಟರ್ ದ್ರಾವಿಡ್ ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ ಅಂಡರ್-19 ತಂಡದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದರು.
ಈ ವರ್ಷದ ಜುಲೈನಲ್ಲಿ ಭಾರತ ಅಂಡರ್-19 ತಂಡದ ಶ್ರೀಲಂಕಾ ಪ್ರವಾಸಕ್ಕೂ 17 ವರ್ಷದ ಆಟಗಾರ ಅನ್ವಯ್ ಆಯ್ಕೆಯಾಗಿದ್ದರು.
ಕರ್ನಾಟಕವು, ಗುಜರಾತ್, ಜಾರ್ಖಂಡ್, ಚಂಡೀಗಢ, ಹಿಮಾಚಲ ಪ್ರದೇಶ ಮತ್ತು ದೆಹಲಿಯೊಂದಿಗೆ ಎಲೈಟ್ ಗ್ರೂಪ್ Eನಲ್ಲಿ ಸ್ಥಾನ ಪಡೆದಿದೆ.
ಕರ್ನಾಟಕ ತಂಡ
ಅನ್ವಯ್ ದ್ರಾವಿಡ್(ನಾಯಕ), ನಿತೀಶ್ ಆರ್ಯ, ಧ್ರುವ ಕೃಷ್ಣನ್, ಆರ್ ರೋಹಿತ್ ರೆಡ್ಡಿ, ಆದರ್ಶ್ ಎಸ್‌ಜೆ, ಸುಜಯ್ ಕೊರ್ವಾರ್, ವರುಣ್ ಪಟೇಲ್(wk), ಅನಿಕೇತ್ ರೆಡ್ಡಿ, ಪಿ ತೇಜಸ್ ರೆಡ್ಡಿ, ಸಮರ್ಥ್ ಎಂ ಕುಲಕರ್ಣಿ, ವೈಭವ್ ಸಿ, ಗೌರವ್ ವೆಂಕಟೇಶ್, ರತನ್ ಬಿಆರ್, ಡಿ ಪ್ರೀತಂ ರಾಜ್, ಡಿ ಪ್ರೀತಂ ರಾಜ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



