ರಾಜ್ಯ

ಬೆಂಗಳೂರು: ರಸ್ತೆಯಲ್ಲಿ ಕಸ ಹಾಕಬೇಡಿ ಅಂದಿದ್ದಕ್ಕೆ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗ ಥಳಿತ; ಪ್ರಕರಣ ದಾಖಲು!

ಬೆಂಗಳೂರಿಗೆ ಕೆಲಸ ಮಾಡಲು ಸುರಕ್ಷಿತ ಸ್ಥಳವೆಂದು ಭಾವಿಸಿ ಬಂದಿದ್ದೇನೆ. ಕೆಲವರು ಈ ರೀತಿ ಮಾಡುವ ಮೂಲಕ ನಗರದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ರಸ್ತೆಯಲ್ಲಿ ಕಸ ಹಾಕಬೇಡಿ ಅಂದಿದ್ದಕ್ಕೆ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗ ಥಳಿತ; ಪ್ರಕರಣ ದಾಖಲು!
Published On :

ಬೆಂಗಳೂರು: ರಸ್ತೆಯಲ್ಲಿ ಕಸ ಹಾಕಬೇಡಿ ಎಂದು ಹೇಳಿದ್ದಕ್ಕೆ ಕೆಲವು ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಲೇಜು ಪ್ರಾಧ್ಯಾಪಕರೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹಲ್ಲೆಯಲ್ಲಿ ನನ್ನ ದವಡೆ ಮುರಿದಿದೆ ಎಂದು ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಹೇಳಿದ್ದಾರೆ. ಪ್ರಾಧ್ಯಾಪಕರು ನೀಡಿದ ಮಾಹಿತಿಯ ಆಧಾರದ ಮೇಲೆ ಕುಮಾರಸ್ವಾಮಿ ಲೇಔಟ್ ಪೊಲೀಸರು ದೂರು ದಾಖಲಿಸಿದ್ದಾರೆ.

ನಿನ್ನೆ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕೆಲವರು ರಸ್ತೆಯಲ್ಲಿ ಕಸ ಹಾಕುತ್ತಿರುವುದನ್ನು ನೋಡಿದ್ದಾರೆ. ಕಸದಿಂದಾಗಿ ತಮ್ಮ ವಾಹನ ಸ್ಕಿಡ್ ಆಗಬಹುದು ಎಂಬ ಆತಂಕದಿಂದ ಅವರು ಕಸ ಹಾಕದಂತೆ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ಹೆಲ್ಮೆಟ್‌ನಿಂದ ಹೊಡೆದಿದೆ ಎಂದು ಗುಪ್ತಾ ಹೇಳಿಕೊಂಡಿದ್ದಾರೆ. ಹಲ್ಲೆಗೆ ಸಾಕ್ಷಿಯಾಗಿ ತಮ್ಮ ಗಾಯಗಳನ್ನು ತೋರಿಸುವ ವೀಡಿಯೊವನ್ನು ಪ್ರಾಧ್ಯಾಪಕರು ಪೊಲೀಸರಿಗೆ ನೀಡಿದ್ದು ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಕೆಲಸ ಮಾಡಲು ಸುರಕ್ಷಿತ ಸ್ಥಳವೆಂದು ಭಾವಿಸಿ ಬಂದಿದ್ದೇನೆ. ಕೆಲವರು ಈ ರೀತಿ ಮಾಡುವ ಮೂಲಕ ನಗರದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.