ಬೆಲೆ ಏರಿಕೆ ಎಫೆಕ್ಟ್: ಜನರ ಜೇಬು ಸುಡಲಿದೆ ಫಿಲ್ಟರ್ ಕಾಫಿ!
ಹಾಲು ಹಾಗೂ ಕಾಫಿ ಪುಡಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟಲ್ ಗಳು ಫಿಲ್ಟರ್ ಕಾಫಿಯ ದರಗಳನ್ನು ಪರಿಷ್ಕರಿಸಿದ್ದು, 3-5ರೂ ಹೆಚ್ಚಿವೆ.

ಬೆಂಗಳೂರು: ಬೆಲೆ ಏರಿಕೆಯ ಪರಿಣಾಮ ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿಯುವ ಮೊದಲು ಜನರು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಹಾಲು ಹಾಗೂ ಕಾಫಿ ಪುಡಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟಲ್ ಗಳು ಫಿಲ್ಟರ್ ಕಾಫಿಯ ದರಗಳನ್ನು ಪರಿಷ್ಕರಿಸಿದ್ದು, 3-5ರೂ ಹೆಚ್ಚಿವೆ. ಇದರಂತೆ ರೂ.15 ಬೆಲೆಯಿದ್ದ ಒಂದ್ ಕಪ್ ಕಾಫಿಯ ಬೆಲೆ ಇದೀಗ ರೂ.18ಕ್ಕೆ ಏರಿಕೆಯಾಗಿದೆ. ಕೆಲವೆಗೆ ರೂ.20-25ಕ್ಕೆ ಏರಿಕೆಯಾಗಿದೆ.
ಪ್ರಮುಖ ಉತ್ಪನ್ನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡುವುದು ಬಿಟ್ಟರೆ ನಮಗೆ ಬೇರಾವುದೇ ದಾರಿಯಿಲ್ಲ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಕಾಫಿ ಪುಡಿಯ ಬೆಲೆ ಕಳೆದ ಮೂರು ತಿಂಗಳಿಗಿಂತ ತೀವ್ರವಾಗಿ ಏರಿಕೆಯಾಗಿದ್ದು, ಕೆಲ ಕಾಫಿ ಬೀಜಗಳು ಪ್ರತಿ ಕೆಜಿಗೆ 1,500 ರಿಂದ 2,000 ರೂ.ಗಳವರೆಗೆ ಹೆಚ್ಚಳವಾಗಿದೆ.
ಈ ಹಿಂದೆ ಕೆಜಿಗೆ 580 ರೂ. ಇದ್ದ ಅರೇಬಿಕಾದಂತಹ ಸಾಮಾನ್ಯವಾಗಿ ಬಳಸುವ ಬ್ರ್ಯಾಂಡ್ಗಳು ಕೂಡ ಇದೀಗ ಕೆಜಿಗೆ 730 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ, ಹಾಲಿನ ಬೆಲೆಗಳು ಕೂಡ ಲೀಟರ್ಗೆ 4 ರೂ.ಗಳಷ್ಟು ಏರಿಕೆಯಾಗಿವೆ ಮತ್ತು ವಿದ್ಯುತ್ ಬೆಲೆ ಕೂಡ ತೀವ್ರವಾಗಿ ಏರಿಕೆಯಾಗಿವೆ, ಇದು ನಮ್ಮ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.
ಬೆಲೆ ಏರಿಕೆಯು ದೊಡ್ಡ ಹೊಡೆತವಾಗಿದೆ. ಕಾಫಿ ಬೀಜಗಳ ಜೊತೆಗೆ ಹಾಲಿನ ದರ ಕೂಡ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ ಎಂದು ಐಡಿಸಿಯ ಸ್ವಾಮಿ ನಂದನ್ ಅವರು ಹೇಳಿದ್ದಾರೆ.
ಗ್ರಾಹಕರಂತೆಯೇ ನಮಗೂ ನೋವಾಗುತ್ತಿದೆ. ಪರಿಣಾಮವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಿದ್ದೆವು. ಆದರೆ, ಎಲ್ಲಾ ವೆಚ್ಚಗಳು ಹೆಚ್ಚಾಗಿರುವುದರಿಂದ ಬೆಲೆಗಳನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ಇದೀಗ ಗ್ರಾಹಕರು ಕಾಫಿ ಬ್ರೇಕ್ ಗಳನ್ನು ಕಡಿಮೆ ಮಾಡಿದ್ದು, ಕಾಫಿಗಾಗಿ ಹೋಟೆಲ್ ಗೆ ಬರುವ ಜನರ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದು ಹಂಕಲ್ ಕಾಫಿಯ ಅಭಿಮನ್ಯು ಅವರು ತಿಳಿಸಿದ್ದಾರೆ.
ಬೆಲೆ ಏರಿಕೆ ಬಗ್ಗೆ ಜನರು ಸಾಕಷ್ಟು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಇದರಿಂದ ನಾವೂ ಒತ್ತಡಕ್ಕೊಳಗಾಗುತ್ತಿದ್ದೇವೆ. ಒಂದು ಕಪ್ ಚಹಾ ಅಥವಾ ಕಾಫಿಗೆ ಕೇವಲ 50 ಮಿಲಿ ಹಾಲು ಬೇಕಾಗುತ್ತದೆಯಷ್ಟೇ ಎಂದು ವಾದಿಸುತ್ತಿದ್ದಾರೆ. ಕಾಫಿ ತಯಾರಿಗೆ ಹಿಂದಿರುವ ಹಲವು ಚಿತ್ರಣಗಳು ಅವರಿಗೆ ಕಾಣುವುದೇ ಇಲ್ಲ. ಕಚ್ಚಾ ವಸ್ತುಗಳಿಂದ ಹಿಡಿದು ವಿದ್ಯುತ್ ವರೆಗೆ ಎಲ್ಲಾ ಬೆಲೆಯೂ ಹೆಚ್ಚಾಗಿದೆ. ಪದೇ ಪದೇ ಮನವಿ ಮಾಡಿದರೂ, ಸರ್ಕಾರ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



