ರಾಜ್ಯ

ಕಲೆಕ್ಷನ್ ವಿಚಾರವಾಗಿ ಮಂಗಳ ಮುಖಿಯರ ನಡುವೆ ಗಲಾಟೆ; ನಡು ರಸ್ತೆಯಲ್ಲೇ ಮಾರಾಮಾರಿ!

ಜಗನ್ಮೋಹನ ಅರಮನೆಯ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಈ ಮಾರಾಮಾರಿ ನಡೆದಿದೆ. ತಮ್ಮ Area ಗೆ ಬಂದಿದ್ದ ಮಂಗಳಮುಖಿಯರ ಗುಂಪು ಅಲ್ಲಿ ಕಲೆಕ್ಷನ್ ಮಾಡುತ್ತಿರುವುದನ್ನು ಮತ್ತೊಂದು ಗುಂಪು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ.

ಕಲೆಕ್ಷನ್ ವಿಚಾರವಾಗಿ ಮಂಗಳ ಮುಖಿಯರ ನಡುವೆ ಗಲಾಟೆ; ನಡು ರಸ್ತೆಯಲ್ಲೇ ಮಾರಾಮಾರಿ!
ಮಂಗಳ ಮುಖಿಯರ ನಡುವೆ ಮಾರಾಮಾರಿ — online desk
Published On :

ಮೈಸೂರು: ಕಲೆಕ್ಷನ್ ವಿಚಾರವಾಗಿ ಮಂಗಳ ಮುಖಿಯರ ಎರಡು ಗುಂಪಿನ ನಡುವೆ ಜಗಳವಾಗಿದ್ದು, ನಡು ಬೀದಿಯಲ್ಲೇ ಹೊಡೆದಾಡಿಕೊಂಡ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಾರಾ ಮಾರಿ ನಡೆದಿರುವ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಗನ್ಮೋಹನ ಅರಮನೆಯ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಈ ಮಾರಾಮಾರಿ ನಡೆದಿದೆ. ತಮ್ಮ Area ಗೆ ಬಂದಿದ್ದ ಮಂಗಳಮುಖಿಯರ ಗುಂಪು ಅಲ್ಲಿ ಕಲೆಕ್ಷನ್ ಮಾಡುತ್ತಿರುವುದನ್ನು ಮತ್ತೊಂದು ಗುಂಪು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ.

ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಓರ್ವ ಮಂಗಳ ಮುಖಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದೂ ಬಹಿರಂಗವಾಗಿದೆ. ಈ ಗಲಾಟೆಯನ್ನು ಕಂಡ ಜನರು ಕೆಲಕಾಲ ಭಯಗೊಂಡಿದ್ದರು. ಸಾರ್ವಜನಿಕರು ಮಧ್ಯಪ್ರವೇಶಿಸಿದರೂ ಇವರ ಹೊಡೆದಾಟ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರೂ ಸಹ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದರು. ಘಟನೆಯ ದೃಶ್ಯ ಸೆರೆಯಾಗಿದ್ದು, ವೈರಲ್​ ಆಗಿದೆ.

ಸಾರ್ವಜನಿಕ ಪ್ರದೇಶದಲ್ಲಿ ದುರ್ವತನೆ ತೋರಿದ ಹಿನ್ನೆಲೆಯಲ್ಲಿ ಪೊಲೀಸರು ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.