ನಗರದಲ್ಲಿ 200 ಅನಧಿಕೃತ ಕಟ್ಟಡ ಪತ್ತೆ, ಮಹದೇವಪುರದಲ್ಲೇ ಅತಿ ಹೆಚ್ಚು: BBMP
ನಗರದಲ್ಲಿ ಕಟ್ಟಡಗಳ ಅನಧಿಕೃತ ನಿರ್ಮಾಣದ ಸರ್ವೇ ಕಾರ್ಯ ಮುಂದುವರಿಸಲಾಗಿದ್ದು, ಈವರೆಗೆ 200ಕ್ಕೂ ಹೆಚ್ಚಿನ ಕಟ್ಟಡಗಳು ಅನುಮತಿ ಪಡೆಯದೇ ಹೆಚ್ಚುವರಿ ನಿರ್ಮಾಣ ಮಾಡಿರುವುದನ್ನು ಪತ್ತೆ ಮಾಡಲಾಗಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 8 ವಲಯಗಳಲ್ಲಿ ಸುಮಾರು 200 ಅನಧಿಕೃತ ಕಟ್ಟಡಗಳು ಪತ್ತೆಯಾಗಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಟ್ಟಡಗಳ ಅನಧಿಕೃತ ನಿರ್ಮಾಣದ ಸರ್ವೇ ಕಾರ್ಯ ಮುಂದುವರಿಸಲಾಗಿದ್ದು, ಈವರೆಗೆ 200ಕ್ಕೂ ಹೆಚ್ಚಿನ ಕಟ್ಟಡಗಳು ಅನುಮತಿ ಪಡೆಯದೇ ಹೆಚ್ಚುವರಿ ನಿರ್ಮಾಣ ಮಾಡಿರುವುದನ್ನು ಪತ್ತೆ ಮಾಡಲಾಗಿದೆ. ಈವರೆಗೆ ಮಹದೇವಪುರ ವಲಯದಲ್ಲಿ 65 ಹಾಗೂ ಪಶ್ಚಿಮ ವಲಯದಲ್ಲಿ 27 ಹೆಚ್ಟಿನ ಅನಧಿಕೃತ ಕಟ್ಟಡಗಳು ಪತ್ತೆಯಾಗಿವೆ. ನಿಖರವಾದ ಅಂಕಿಅಂಶಗಳನ್ನು ಸಂಬಂಧಪಟ್ಟ ವಲಯ ಅಧಿಕಾರಿಗಳು ಶೀಘ್ರದಲ್ಲೇ ನೀಡಲಿದ್ದು, ಸಮೀಕ್ಷೆ ಮುಂದುವರಿಯುವುದರಿಂದ ಈ ಸಂಖ್ಯೆಯೂ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದರು.
ಸರ್ವೇ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಖಾಸಗಿ ಸಂಸ್ಥೆಯಿಂದ 70 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತಿದೆ. ಜೊತೆದೆ ಮೊಬೈಲ್ ಆ್ಯಪ್ ಕೂಡ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಡಿಎ ಲೇಔಟ್‌ಗಳಲ್ಲಿ ಅನಧಿಕೃತ ಕಟ್ಟಡಗಳು ಹಾಗೂ ಅಕ್ರಮ ಬಡಾವಣೆಗಳ ನಿರ್ಮಾಣ ಕುರಿತು ನಗರದ ನಿವಾಸಿಗಳು ದೂರು ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಬಿಡಿಎಗೆ ಪತ್ರ ಬರೆದಿದ್ದು, ಪ್ಲಾಟ್‌ಗಳ ಮಾಲೀಕರು ಬಿಡಿಎಯಿಂದ ಅನುಮೋದನೆ ಪಡೆಯಲು ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
20,000 ಚದರ ಮೀಟರ್ ಅಳತೆಯ ಲೇಔಟ್‌ಗಳು ಮತ್ತು ಸಿಂಗಲ್ ಪ್ಲಾಟ್‌ಗಳನ್ನು ನಿರ್ಮಾಣ ಅಧಿಕಾರ ಬಿಡಿಎಗೆ ಇದ್ದು, ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಸಾರ್ವಜನಿಕ ಉಪಯುಕ್ತತೆಗಳು ಮತ್ತು ಉತ್ತಮ ನಾಗರಿಕ ಸೌಕರ್ಯಗಳಂತಹ ಸೌಕರ್ಯಗಳನ್ನು ಪಡೆಯಲು ಫ್ಲ್ಯಾಟ್ ಮಾಲೀಕರು ಬಿಡಿಎಯಿಂದ ಅನುಮೋದನೆ ಪಡೆಯಬೇಕಿದೆ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



