ಬೆಂಗಳೂರು: ಕಳೆದ 123 ವರ್ಷಗಳಲ್ಲಿ ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಒಣ ಹವೆ, 159 ದಿನಗಳ ನಂತರ ಮಳೆ!
ಕಳೆದ 123 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಣಹವೆ ಉಂಟಾಗಿದೆ. ಆದರೆ, ಇದೀಗ 159 ದಿನಗಳ ಅಂತರದ ನಂತರ ಗುರುವಾರ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಬೆಂಗಳೂರು: ಕಳೆದ 123 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಣಹವೆ ಉಂಟಾಗಿದೆ. ಆದರೆ, ಇದೀಗ 159 ದಿನಗಳ ಅಂತರದ ನಂತರ ಗುರುವಾರ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರು ನಿರ್ದೇಶಕ ಎನ್ ಪುವಿಯರಸನ್ ಪ್ರಕಾರ, 1901 ರಿಂದ 2024 ರವರೆಗೆ, ನಗರದಲ್ಲಿ ಏಪ್ರಿಲ್‌ನಲ್ಲಿ ಮಳೆಯಿಲ್ಲದಿರುವುದು ಇದೇ ಮೊದಲ ಬಾರಿಗೆ. ಗುರುವಾರ ಸಂಜೆ ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿರುವ ವರದಿಯಾಗಿದೆ. ಆದರೆ ಐಎಂಡಿಯ ವೀಕ್ಷಣಾಲಯಗಳು ಯಾವುದೇ ಮಳೆಯನ್ನು ದಾಖಲಿಸಿಲ್ಲ ಎಂದಿದ್ದಾರೆ.
ಆದಾಗ್ಯೂ, ಮೋಡಗಳ ರಚನೆ ಮತ್ತು ಸಂಜೆಯ ಹವಾಮಾನ ಪರಿಸ್ಥಿತಿಗಳಲ್ಲಿನ ಹಠಾತ್ ಬದಲಾವಣೆಯು ಬೇಸಿಗೆಯಿಂದ ತಣಿದಿದ್ದ ಬೆಂಗಳೂರಿನ ನಿವಾಸಿಗಳಿಗೆ ಕೊಂಚ ಮಟ್ಟದ ರಿಲೀಫ್ ನೀಡಿದೆ.
ಸ್ಥಳೀಯ ಹವಾಮಾನ ಪರಿಸ್ಥಿತಿಯಿಂದಾಗಿ ನಗರದ ಕೆಲವೆಡೆ ಮಳೆಯಾಗಲಿದೆ. ಆದರೆ, ಐದು ದಿನಗಳ ನಂತರ ಗುಡುಗು ಸಹಿತ ಮಳೆಯಾಗಲಿದೆ. ಕ್ಲುಮಿನೊ-ನಿಂಬಸ್ ಮೋಡಗಳ ರಚನೆ ಮತ್ತು ಗುಡುಗು ಸಹಿತ ಮಳೆಯು ಸ್ಥಳೀಯ ಹವಾಮಾನ ಪರಿಸ್ಥಿತಿಯಿಂದಾಗಿ ಸಂಭವಿಸುತ್ತದೆ ಎಂದು ಪುವಿಯರಸನ್ ಹೇಳಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಕೊಂಚ ವಿರಾಮ ಸಿಕ್ಕಿದ್ದರೆ, ಉತ್ತರ ಒಳನಾಡಿನಲ್ಲಿ ತಾಪಮಾನ ಮುಂದುವರಿಯಲಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



