ನ್ಯಾಚುರಲಿಸ್ಟ್ ಟ್ರೈನಿಂಗ್ ಕೋರ್ಸ್: ನಿಸರ್ಗದ ಬಗ್ಗೆ ತರಬೇತಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ!
ಸರ್ಕಾರಿ ಏಜೆನ್ಸಿಗಳು ಮತ್ತು ನಿವೃತ್ತ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಗಳೊಂದಿಗೆ ಕೆಲಸ ಮಾಡುವ ತರಬೇತಿ ಪಡೆದ ನೈಸರ್ಗಿಕವಾದಿಗಳು ತರಬೇತಿ ನೀಡುತ್ತಾರೆ.

ಬೆಂಗಳೂರು: ಇತ್ತೀಚೆಗೆ ನ್ಯಾಚುರಲಿಸ್ಟ್ ಟ್ರೈನಿಂಗ್ ಕೋರ್ಸ್ ಎಂಬ ಪರಿಕಲ್ಪನೆ ಹೆಚ್ಚು ಜನಪ್ರಿಯವಾಗುತ್ತಿದೆ. ಜನರು ನೈಸರ್ಗಿಕವಾದಿಗಳೆಂಬ(naturalists) ಪ್ರಮಾಣೀಕೃತ ಕೋರ್ಸ್ ನ್ನು ನೀಡುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕ. ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಕಾರ್ಯಕ್ರಮದಡಿ ಈ ತರಬೇತಿ ನೀಡಲಾಗುತ್ತಿದೆ.
ಏನಿದು naturalists?: ಸರ್ಕಾರಿ ಏಜೆನ್ಸಿಗಳು ಮತ್ತು ನಿವೃತ್ತ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಗಳೊಂದಿಗೆ ಕೆಲಸ ಮಾಡುವ ತರಬೇತಿ ಪಡೆದ ನೈಸರ್ಗಿಕವಾದಿಗಳು ತರಬೇತಿ ನೀಡುತ್ತಾರೆ. ಸರ್ಕಾರದಿಂದ ಪ್ರಮಾಣೀಕರಿಸಿದ ಪಟ್ಟಿಯ 16 ಕೌಶಲ್ಯ ತರಬೇತಿ ಕೋರ್ಸ್‌ಗಳಲ್ಲಿ ಇದು ಕೂಡ ಒಂದಾಗಿದೆ.
ಇದು ಒಂದು ತಿಂಗಳ ಕ್ಯಾಡೆಟ್ ತರಬೇತಿಯಂತಿದೆ. ಇದರಲ್ಲಿ 15 ದಿನಗಳ ಥಿಯರಿ ಮತ್ತು 15 ದಿನಗಳ ಪ್ರಾಯೋಗಿಕ ಜ್ಞಾನವನ್ನು ಒಳಗೊಂಡಿರುತ್ತದೆ. ಕೀಟಗಳು, ಚಿಟ್ಟೆಗಳು, ಮಣ್ಣು, ಸಸ್ಯ, ಪ್ರಾಣಿಗಳು ಮತ್ತು ವನ್ಯಜೀವಿಗಳ ವಿವರಗಳನ್ನು ಒಳಗೊಂಡಂತೆ ಪ್ರಕೃತಿಯ ಎಲ್ಲಾ ಅಂಶಗಳನ್ನು ಕಲಿಸಲಾಗುತ್ತದೆ. ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಪಿಯುಸಿಯಾಗಿದೆ.
ಇಲ್ಲಿಯವರೆಗೆ ಎರಡು ಬ್ಯಾಚ್‌ಗಳ ತರಬೇತಿಯನ್ನು ಈಗಾಗಲೇ ನಡೆಸಲಾಗಿದೆ. ಮುಂದಿನ ಹಂತದಲ್ಲಿ, ನಾವು ಆರು ತಿಂಗಳ ಕೋರ್ಸ್ ನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಜನರು ತರಬೇತಿ ಪಡೆಯಲು ಮತ್ತು ಸ್ವಾವಲಂಬಿಯಾಗಲು ಸಹಾಯ ಮಾಡಲು ಕೋರ್ಸ್ ನ್ನು ಪ್ರಾರಂಭಿಸಲಾಗಿದೆ. ನಮ್ಮ ಕೆಲಸದ ಸಮಯದಲ್ಲಿ, ಬಹಳಷ್ಟು ಜನರು ಸ್ಥಳೀಯ ಜ್ಞಾನವನ್ನು ಹೊಂದಿದ್ದಾರೆ, ಆದರೆ ಹಣಕಾಸಿನ ಮತ್ತು ಪರಿಣತಿಯ ಕೊರತೆಯನ್ನು ನಾವು ನೋಡಿದ್ದೇವೆ. ಹೀಗಾಗಿ ಈ ಕಾರ್ಯಕ್ರಮ ಆರಂಭಿಸಿದ್ದೇವೆ. ಇಲ್ಲಿಯವರೆಗೆ ಸುಮಾರು 60 ಮಂದಿಗೆ ತರಬೇತಿ ನೀಡಲಾಗಿದೆ. ಕೆಲವರು ಖಾಸಗಿ ರೆಸಾರ್ಟ್‌ಗಳಲ್ಲಿ ನೈಸರ್ಗಿಕವಾದಿಗಳು ಮತ್ತು ಮಾರ್ಗದರ್ಶಕರಾಗಿ ಕೆಲಸ ಪಡೆದರೆ, ಕೆಲವರು ತಮ್ಮ ಸ್ವಂತ ಹಳ್ಳಿಗಳಿಗೆ ಹಿಂತಿರುಗಿ ಉದ್ಯಮಿಗಳಾಗಿದ್ದಾರೆ ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿಯೊಬ್ಬರು ಹೇಳಿದರು.
ಗ್ರಾಮೀಣ ಪ್ರವಾಸೋದ್ಯಮ, ಹೋಂ ಸ್ಟೇಗಳು, ರೆಸಾರ್ಟ್‌ಗಳು, ಸಂರಕ್ಷಣೆ ಮತ್ತು ಸಮುದಾಯ ಮೀಸಲುಗಳು ಜನಪ್ರಿಯವಾಗುತ್ತಿರುವುದರಿಂದ ಗ್ರಾಮೀಣ ಜನರು ಈ ಕೋರ್ಸ್‌ನಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಅಧಿಕಾರಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಯುವಜನತೆ ರಜಾದಿನಗಳಲ್ಲಿ ಸಾಹಸಗಳಿಗೆ ನಗರದ ಹೊರವಲಯಕ್ಕೆ ಪ್ರಯಾಣಿಸುತ್ತಿದ್ದಾರೆ, ತರಬೇತಿ ಪಡೆದ ನೈಸರ್ಗಿಕವಾದಿಗಳ ಬೇಡಿಕೆಯು ಹೆಚ್ಚುತ್ತಿದೆ.
ಕರ್ನಾಟಕದಲ್ಲಿ ತರಬೇತಿ ಪಡೆದ ಇತರ ರಾಜ್ಯಗಳ ಉತ್ಸಾಹಿಗಳನ್ನು ಅವರ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿ ಪ್ರಯಾಣಕ್ಕಾಗಿ ಬಳಸಿಕೊಳ್ಳುತ್ತಾರೆ. ಅರಣ್ಯ ಕಾಲೇಜುಗಳ ನಿವೃತ್ತ ಪ್ರಾಧ್ಯಾಪಕರೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಏಳು ನುರಿತ ನೈಸರ್ಗಿಕ ತಜ್ಞರನ್ನು ಸಂಪರ್ಕಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


