ತುಮಕೂರು: ಕಾರಿನಲ್ಲಿ ಮೂವರನ್ನು ಸುಟ್ಟಿದ್ದ ಪ್ರಕರಣ; ನಿಧಿ ವಿಚಾರವಾಗಿ ಹತ್ಯೆ, ಇಬ್ಬರ ಬಂಧನ
ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

ತುಮಕೂರು: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಇಲ್ಲಿನ ಸಿರಾ ಗೇಟ್‌ನ ಸ್ವಯಂ ಘೋಷಿತ ಅರ್ಚಕ ರಾಜು ಅಲಿಯಾಸ್ ರಾಜಗುರು ಕುಮಾರ್ ಅಲಿಯಾಸ್ ಪಾತರಾಜು (35) ಮತ್ತು ಸತ್ಯಮಂಗಲದ ಗಂಗರಾಜು (35) ಎಂಬುವರನ್ನು ಬಂಧಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಎಸ್‌ಡಿಪಿಐ ಸದಸ್ಯ ಸಾಹುಲ್ (45), ಇಸಾಕ್ (56) ಮತ್ತು ಸಿದ್ದಿಕ್ (34) ಫೆಬ್ರವರಿ 22 ರಂದು ಹತ್ಯೆಗೀಡಾಗಿದ್ದರು.
ಜಮೀನೊಂದರಲ್ಲಿ ಸಿಕ್ಕ ಚಿನ್ನದ ಒಡವೆ ನೀಡುವುದಾಗಿ ಭರವಸೆ ನೀಡಿ ಸಂತ್ರಸ್ತರಿಂದ 6 ಲಕ್ಷ ರೂ.ಗಳನ್ನು ಪಾತರಾಜು ಪಡೆದಿದ್ದರು. ಅವರು ನೀಡಿದ ಭರವಸೆಯನ್ನು ಈಡೇರಿಸದಿದ್ದಾಗ, ಸಂತ್ರಸ್ತರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು.
ಗಂಗರಾಜು ಮೂಲಕ ಅರ್ಚಕರು ಸಂತ್ರಸ್ತರನ್ನು ಕೊಲ್ಲಲು ಆರು ಮಂದಿಯನ್ನು ನೇಮಿಸಿಕೊಂಡಿದ್ದರು. ಶವಗಳನ್ನು ಕಾರಿನೊಳಗೆ ತುಂಬಿ ಕೂಚಂಗಿ ಕೆರೆ ಬಳಿ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



