ಮನೆ ದರೋಡೆ, ಕಳ್ಳತನ ತಡೆಗೆ 'ಸ್ವಯಂಸೇವಕ ಬೀಟ್’ ಆರಂಭಕ್ಕೆ ನಗರ ಪೊಲೀಸರು ಮುಂದು!
ಮನೆ ದರೋಡೆ, ಕಳ್ಳತನ ತಡೆಯಲು ಸಾರ್ವಜನಿಕರ ಬೆಂಬಲದೊಂದಿಗೆ 'ಸ್ವಯಂಸೇವಕ ಬೀಟ್’ ಆರಂಭಿಸಲು ನಗರ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು: ಮನೆ ದರೋಡೆ, ಕಳ್ಳತನ ತಡೆಯಲು ಸಾರ್ವಜನಿಕರ ಬೆಂಬಲದೊಂದಿಗೆ 'ಸ್ವಯಂಸೇವಕ ಬೀಟ್’ ಆರಂಭಿಸಲು ನಗರ ಪೊಲೀಸರು ಮುಂದಾಗಿದ್ದಾರೆ,
ಮಹಾಲಕ್ಷ್ಮಿ ಲೇಔಟ್‌ನ ಡಾ.ರಾಜ್‌ಕುಮಾರ್ ಸಭಾಂಗಣದಲ್ಲಿ ಶನಿವಾರ ನಡೆದ ‘ಜನ ಸಂಪರ್ಕ ಸಭೆ’ಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ವಿಜಯನಗರ ಮತ್ತು ಚಂದ್ರಾ ಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ 'ಸ್ವಯಂಸೇವಕ ಬೀಟ್’ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ,
ನಗರ ಪೊಲೀಸರು ಈ ಹಿಂದೆ ‘ನೆರೆಹೊರೆ ಪೊಲೀಸ್’ ಮತ್ತು ‘ಪೊಲೀಸ್ ಸ್ವಯಂಸೇವಕರು’ ನಂತಹ ಉಪಕ್ರಮಗಳನ್ನು ಹೊಂದಲಾಗಿದೆ, ಸ್ವಯಂಸೇವಕ ಬೀಟ್ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಬೇಕು, ಇದರಿಂದ ರಾತ್ರಿಯಲ್ಲಿ ದರೋಡೆ ಪ್ರಕರಣಗಳನ್ನು ಪರಿಹರಿಸಬಹುದು ಎಂದು ತಿಳಿಸಿದರು.
ಏತನ್ಮಧ್ಯೆ, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾರಾದರೂ ಅನುಮಾನಾಸ್ಪದವಾಗಿ ತಮ್ಮ ಅಂಗಡಿಗಳಿಗೆ ಭೇಟಿ ನೀಡಿದರೆ ಅಥವಾ ಸುತ್ತಮುತ್ತ ಅಡಗಿಕೊಂಡಿರುವುದನ್ನು ಗಮನಿಸಿದರೆ ತಕ್ಷಣ ‘112’ ಗೆ ಕರೆ ಮಾಡುವಂತೆ ಕರೆ ನೀಡಿದರು. ದೂರು ಬಂದ ಕೂಡಲೇ ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಪೀಣ್ಯ ಕೈಗಾರಿಕಾ ಪ್ರದೇಶ, ಗೊರಗುಂಟೆಪಾಳ್ಯ ಮುಂತಾದ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿರುವ ಕುರಿತಂತೆಯೂ ಜನರು ಆಯುಕ್ತರಿಗೆ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲು ಅದಾವತ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



