ಮಂಗಳೂರು: ಸ್ಟೀಲ್ ವಾಕಿಂಗ್ ಸ್ಟಿಕ್‌ನಿಂದ ಮಾವನಿಗೆ ಥಳಿಸಿದ ಮಹಿಳೆ ಬಂಧನ, ವಿಡಿಯೋ ವೈರಲ್
ಸೊಸೆಯೊಬ್ಬರು ತಮ್ಮ ವಯೋವೃದ್ಧ ಮಾವನನ್ನು ಸ್ಟೀಲ್ ವಾಕಿಂಗ್ ಸ್ಟಿಕ್‌ನಿಂದ ಅಮಾನುಷವಾಗಿ ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.

ಮಂಗಳೂರು: ಸೊಸೆಯೊಬ್ಬರು ತಮ್ಮ ವಯೋವೃದ್ಧ ಮಾವನನ್ನು ಸ್ಟೀಲ್ ವಾಕಿಂಗ್ ಸ್ಟಿಕ್‌ನಿಂದ ಅಮಾನುಷವಾಗಿ ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.
ಈ ದೃಶ್ಯಾವಳಿಗಳು ಆಘಾತಕ್ಕೆ ಕಾರಣವಾಗಿದ್ದು, ಮಂಗಳೂರಿನ ನಾಗರಿಕ ಸಮಾಜದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆರೋಪಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯಲ್ಲಿ ಮಂಗಳೂರಿನ ಕುಲಶೇಖರ ಎಂಬಲ್ಲಿ ಪದ್ಮನಾಭ ಸುವರ್ಣ ಎಂಬ 87 ವರ್ಷದ ವ್ಯಕ್ತಿಗೆ ಸೊಸೆ ಉಮಾ ಶಂಕರಿ ಎಂಬುವವರು ಥಳಿಸಿದ್ದಾರೆ. ಮಾರ್ಚ್ 9 ರಂದು ಘಟನೆ ನಡೆದಿದ್ದು, ವಾಕಿಂಗ್ ಸ್ಟಿಕ್ ಅನ್ನು ಬಳಸಿರುವುದರಿಂದ ವೃದ್ಧ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಂಗಳೂರು ನಿವಾಸಿಯಾಗಿರುವ ಪದ್ಮನಾಭ ಸುವರ್ಣ ಎಂಬುವವರು ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂತ್ರಸ್ತರ ಮಗಳು ನೀಡಿದ ದೂರಿನ ಮೇರೆಗೆ ಅತ್ತಾವರದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ (ಕೆಇಬಿ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಉಮಾ ಶಂಕರಿ ಅವರನ್ನು ಬಂಧಿಸಲಾಗಿದೆ.
ಸಂತ್ರಸ್ತರ ಪುತ್ರನಾಗಿರುವ ಆರೋಪಿಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ದಾಳಿಯ ಸ್ಥಳದಲ್ಲಿ ಮರದ ಸೋಫಾದ ಮೇಲೆ ಬಿದ್ದಾಗ ತಲೆಗೆ ಗಾಯ ಸೇರಿದಂತೆ ಸಂತ್ರಸ್ತರ ದೇಹದ ಮೇಲೆ ಅನೇಕ ಗಾಯಗಳಿವೆ ಎಂದು ಪದ್ಮನಾಭ ಸುವರ್ಣ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


