ಬಾಯ್ ಫ್ರೆಂಡ್ ಜೊತೆ ಸೇರಿ ಮಕ್ಕಳಿಗೆ ನಿತ್ಯ ಕಿರುಕುಳ: ಪ್ರಕರಣ ದಾಖಲು
ಪತಿಯ ಮೇಲಿನ ಸಿಟ್ಟಿನಿಂದ ಪ್ರಿಯಕರನೊಂದಿಗೆ ಸೇರಿ ಮಹಿಳೆಯೊಬ್ಬಳು ತನ್ನ ಸ್ವಂತ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ನಗರದ ಜೆಜೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ಪತಿಯ ಮೇಲಿನ ಸಿಟ್ಟಿನಿಂದ ಪ್ರಿಯಕರನೊಂದಿಗೆ ಸೇರಿ ಮಹಿಳೆಯೊಬ್ಬಳು ತನ್ನ ಸ್ವಂತ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ನಗರದ ಜೆಜೆ ನಗರದಲ್ಲಿ ಬೆಳಕಿಗೆ ಬಂದಿದೆ.
ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ದಾಂಪತ್ಯದಲ್ಲಿ ಕಲಹ ಉಂಟಾಗಿ ನಂತರ ಡಿವೋರ್ಸ್ ಪಡೆದಿದ್ದಳು. ಈ ವೇಳೆ ಮಕ್ಕಳು ತಾಯಿ ಆಯೇಷಾ ಜೊತೆಯಲ್ಲೇ ಇದ್ದವು. ಆಗಾಗ ಇಮ್ರಾನ್ ಭೇಟಿಯಾಗುತ್ತಿದ್ದರು. ಆದರೆ, ಇತ್ತೀಚಿಗೆ ಆಯೀಶಾ ತನ್ನ ಪ್ರಿಯಕರನೊಂದಿಗೆ ಸೇರಿ ಮಕ್ಕಳಿಗೆ ಕಿರುಕುಳ ನೀಡಲು ಆರಂಭಿಸಿದ್ದಳು.
ಮಕ್ಕಳ ಕಚ್ಚುತ್ತಿದ್ದ ಪಾಪಿ ತಾಯಿ, ಫ್ರಿಡ್ಜ್ ನಿಂದ ತಣ್ಣೀರು ಸುರಿದಿದ್ದಾಳೆ. ಬಳಿಕ ಆಕೆಯ ಬಾಯ್ ಫ್ರೆಂಡ್ ಸಲೀಂ ಎಂಬಾತ ಮಕ್ಕಳ ಕೈ ಮೇಲೆ ಸಿಗರೇಟ್ ನಿಂದ ಸುಟ್ಟು ಗಾಯಗೊಳಿಸಿದ್ದಾನೆ. ಚಿತ್ರ ಹಿಂಸೆ ಬಗ್ಗೆ ಹೇಳಿದರೆ ತಂದೆಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಇದರಿಂದ ಹೆದರಿ ಸಾಕಷ್ಟು ದಿನ ತಂದೆಯ ಬಳಿಯೂ ಹಿಂಸೆ ಬಗ್ಗೆ ಮಕ್ಕಳು ಹೇಳಿಕೊಂಡಿಲ್ಲ. ಫೆಬ್ರವರಿ 23 ಹಾಗೂ 24ರಂದು ತಂದೆಗೆ ಕರೆ ಮಾಡಿರುವ ಮಕ್ಕಳು "ನೀನು ಮತ್ತು ನಿನ್ನ ತಮ್ಮ ನನ್ನ ಮನೆಯಲ್ಲಿರಬೇಡಿ ಎಂದು ಹೇಳಿ ಹೊಡೆಯುತ್ತಾರೆ. ನನ್ನ ಕೈ ಕಚ್ಚಿ, ಮೈಮೇಲೆ ತಣ್ಣೀರೆರಚಿದ್ದಾರೆ. ಸಲೀಂ ಅಂಕಲ್ ನಮ್ಮನ್ನು ಸಿಗರೇಟಿನಿಂದ ಸುಟ್ಟಿದ್ದಾರೆ. ಅಲ್ಲದೆ, ನಾನು ಮನೆಗೆ ಬರುವುದನ್ನು ನಿನ್ನ ತಂದೆಗೆ ಹೇಳಿದರೆ ಸಾಯಿಸುವುದಾಗಿ ಬೆದರಿಸುತ್ತಾರೆ" ಎಂದು ಹೇಳುತ್ತಾರೆಂದು ಹೇಳಿದ್ದಾರೆ.
ಮಕ್ಕಳ ಮಾತನ್ನು ಕೇಳಿದ ಇಮ್ರಾನ್ ಖಾನ್ ಕೂಡಲೇ ಪತ್ನಿಯ ಮನೆಗೆ ತೆರಳಿದ್ದು, ಮಕ್ಕಳಿಬ್ಬರನ್ನೂ ತನ್ನ ಸುಪರ್ದಿಗೆ ಪಡೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಪತ್ನಿ ಆಯೀಶಾ, ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



