ಸಾರ್ವಜನಿಕ ವಾಹನಗಳಿಗೆ ಜಿಪಿಎಸ್-ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ: 6 ಲಕ್ಷ ಪೈಕಿ 1,109 ವಾಹನಗಳಿಂದ ಮಾತ್ರ ನಿಯಮ ಪಾಲನೆ!
ರಾಜ್ಯದಲ್ಲಿರುವ 6 ಲಕ್ಷಕ್ಕೂ ಅಧಿಕ ವಾಹನಗಳಿದ್ದರೂ ಶೇ.1ರಷ್ಟು ವಾಹನಗಳಲ್ಲಿ ಕೂಡ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಅಳವಡಿಕೆಯಾಗಿಲ್ಲ.

ಬೆಂಗಳೂರು: ರಾಜ್ಯದಲ್ಲಿರುವ 6 ಲಕ್ಷಕ್ಕೂ ಅಧಿಕ ವಾಹನಗಳಿದ್ದರೂ ಶೇ.1ರಷ್ಟು ವಾಹನಗಳಲ್ಲಿ ಕೂಡ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಅಳವಡಿಕೆಯಾಗಿಲ್ಲ.
ದೆಹಲಿ ನಿರ್ಭಯಾ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಾದ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಶಾಲಾ ಬಸ್‌ಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.
ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 6,04,863 ವಾಹನಗಳಿದ್ದು, ಈ ಪೈಕಿ ಕೇವಲ 1,109 ವಾಹನಗಳು ಮಾತ್ರ ನಿಯಮವನ್ನು ಅನುಸರಿಸಿವೆ ಎಂದು ತಿಳಿದುಬಂದಿದೆ.
ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಸಾರಿಗೆ ಇಲಾಖೆಯು ಸೆ.10 ಗಡುವು ನೀಡಿದ್ದರೂ, ಶೇ.1ರಷ್ಟು ವಾಹನಗಳೂ ಕೂಡ ಇನ್ನೂ ಉಪಕರಣಗಳನ್ನು ಅಳವಡಿಸಿಲ್ಲ.
ಈ ಬೆಳವಣಿಗೆ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ನಿಯಮ ಕಡ್ಡಾಯ ಎಂಬ ಅರಿವಿಲ್ಲದ ಕಾರಣ ಹಲವು ವಾಹನ ಮಾಲೀಕರು ಉಪಕರಣಗಳನ್ನು ಅಳವಡಿಸುತ್ತಿಲ್ಲ. ಜಾಗೃತಿ ಮೂಡಿಸಿ ವಾಹನ ಮಾಲೀಕರಿಗೆ ಸಾಧನ ಅಳವಡಿಸುವಂತೆ ಒತ್ತಾಯಿಸುತ್ತಿದ್ದೇವೆ. ವಾಹನ ಮಾಲೀಕರು ಸಾಧನವನ್ನು ಅಳವಡಿಸಿಕೊಳ್ಳುವ ಕುರಿತು ಮಾರಾಟಗಾರರನ್ನು ಗುರ್ತಿಸಲಾಗಿದ್ದು, ಅದನ್ನು ವಾಹನ್ ಪೋರ್ಟಲ್‌ನಲ್ಲಿ ನವೀಕರಿಸಲಾಗುತ್ತದೆ. ಪ್ರಯಾಣಿಕರು ಸುರಕ್ಷಿತವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ, ಪ್ರಯಾಣಿಕರು ಅಥವಾ ಚಾಲಕ ಪ್ಯಾನಿಕ್ ಬಟನ್ ಅನ್ನು ಒತ್ತಬಹುದು, ಇದು 20.4 ಕೋಟಿ ರೂಪಾಯಿ ವೆಚ್ಚದಲ್ಲಿ ಸಾರಿಗೆ ಇಲಾಖೆ ಸ್ಥಾಪಿಸಿದ ಕಮಾಂಡ್ ಸೆಂಟರ್'ನ್ನು ತಲುಪಲಿದೆ. ಕೇಂದ್ರದಲ್ಲಿರುವ ತಂಡವು ವಾಹನದ ಸ್ಥಳವನ್ನು ಟ್ರ್ಯಾಕ್ ಮಾಡುವ ಮೂಲಕ ತುರ್ತು ಸಂದೇಶಕ್ಕೆ ಕೂಡಲೇ ಪ್ರತಿಕ್ರಿಯಿಸುತ್ತದೆ. ವಾಹನ ಮಾಲೀಕರು ಅಥವಾ ಚಾಲಕರೊಂದಿಗೆ ಸಂಪರ್ಕದಲ್ಲಿರುತ್ತದೆ. ಅಗತ್ಯವಾದಲ್ಲಿ ಪೊಲೀಸರಿಗೂ ಮಾಹಿತಿ ರವಾನಿಸುತ್ತದೆ ಎಂದು ತಿಳಿಸಿದರು.
ಏತನ್ಮಧ್ಯೆ, ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್ ಬಟನ್ ಅಳವಡಿಸದವರಿಗೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕರಿಸಲಾಗುವುದಿಲ್ಲ. ಈ ನಿರ್ಧಾರವು ಎಲ್ಲರೂ ನಿಯಮ ಅನುಸರಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



