Karnataka Assembly Session: 'ಕೈಗೆ ಕಬ್ಬಿಣ ಕೊಡ್ರಿ.. ತಲೆ ಸರಿ ಇಲ್ವಾ..'; Pradeep Eshwar ವಿರುದ್ಧ ಸ್ಪೀಕರ್ ಯುಟಿ ಖಾದರ್ ಗರಂ
ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳನ್ನು ಆಡಿದರು. ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಅಂತ ಆಕ್ರೋಶ ವ್ಯಕ್ತಪಡಿಸಿ, ಏರು ದನಿಯಲ್ಲಿ ಕಿರುಚಾಡಿದ್ರು.

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮತ್ತೆ ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ವಾಗ್ದಾಳಿ ನಡೆದಿದ್ದು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಧಾನಸಭೆ ಅಧಿವೇಶನದಲ್ಲಿ (Assembly Session) ಚಿಕ್ಕಬಳ್ಳಾಪುರ (Chikkaballapur) ಕಾಂಗ್ರೆಸ್ ಶಾಸಕ (Congress MLA) ಪ್ರದೀಪ್ ಈಶ್ವರ್‌ಗೆ (Pradeep Eshwar) ಸ್ಪೀಕರ್ (Speaker) ಯುಟಿ ಖಾದರ್ (UT Khadar) ಗದರಿದ ಪ್ರಸಂಗ ನಡೆಯಿತು. ಮಾತನಾಡಲು ಅವಕಾಶ ಕೇಳಿದ್ದ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಖಾದರ್ ಅವಕಾಶ ಕೊಟ್ಟಿದ್ದರು.
ಆದರೆ ಈ ವೇಳೆ ಸದನದ ಬಾವಿಗಿಳಿದಿದ್ದ ಪ್ರತಿಪಕ್ಷ ಸದಸ್ಯರು ವಾಲ್ಮೀಕ ಹಗರಣದ ಕುರಿತು ಘೋಷಣೆ ಕೂಗುತ್ತಿದ್ದರು. ಇದರಿಂದ ಕೆರಳಿದ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ಸರ್ಕಾರದ ಹಲವು ಹಗರಣಗಳು ನಡೆದಿದೆ ಎಂದು ಹೇಳಿ ಪಟ್ಟಿಯನ್ನೇ ನೀಡಿದರು. ಆದರೆ ಈ ವೇಳೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳನ್ನು ಆಡಿದರು. ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಅಂತ ಆಕ್ರೋಶ ವ್ಯಕ್ತಪಡಿಸಿ, ಏರು ದನಿಯಲ್ಲಿ ಕಿರುಚಾಡಿದ್ರು.
ಪ್ರದೀಪ್ ಈಶ್ವರ್ ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ?
ಇದಕ್ಕೆ ಗರಂ ಆದ ಸ್ಪೀಕರ್ ಖಾದರ್, ಪ್ರದೀಪ್ ಈಶ್ವರ್‌ಗೆ ಗದರಿದ್ರು. ಪ್ರದೀಪ್ ಈಶ್ವರ್ ಕೈಗೆ ಕಬ್ಬಿಣ ಏನಾದ್ರೂ ಕೊಡ್ರಿ ಅಂತ ಖಾದರ್ ಬೈಯ್ದರು. ಕುಳಿತು ಕೊಳ್ಳುವಂತೆ ಸಾವಧಾನದಿಂದಲೇ ಸ್ಪೀಕರ್ ಹೇಳಿದ್ರು. ಆದ್ರೆ ಪ್ರದೀಪ್ ಈಶ್ವರ್ ಕೇಳಲೇ ಇಲ್ಲ. ಆಗ ಖಾದರ್ ಗರಂ ಆದ್ರು. ಪ್ರದೀಪ್ ಈಶ್ವರ್, ಕುಳಿತುಕೊಳ್ರೀ, ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ ಅಂತ ಗದರಿಸಿದ್ರು.
ಸ್ಪೀಕರ್ ಹೇಳಿದ್ರೂ ಸುಮ್ಮನಾಗದ ಪ್ರದೀಪ್ ಈಶ್ವರ್
ಇಷ್ಟಾದರೂ ಪ್ರದೀಪ್ ಈಶ್ವರ್ ಕುಳಿತುಕೊಳ್ಳದೇ ಕೂಗಾಟ ಮುಂದುವರೆಸಿದರು. ಸ್ಪೀಕರ್ ಆದೇಶಿಸಿದ್ರೂ ಮಾತು ನಿಲ್ಲಿಸದಿದ್ದರಿಂದ ಕೊನೆಗೆ ಪ್ರದೀಪ್ ಈಶ್ವರ್ ಬಳಿ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೋಗಿ ಸಮಾಧಾನ ಮಾಡಿದ್ರು. ಕುಳಿತುಕೊಳ್ಳುವಂತೆ ಕೈ ಮುಗಿದು ಮನವಿ ಮಾಡಿದರು. ನಂತರ ಪ್ರದೀಪ್ ಬಳಿ ಹೋಗಿ ಕುಳಿತುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



