ಇಬ್ಬರನ್ನು ಬಲಿ ಪಡೆದ ಆನೆ ಸೆರೆಗೆ ಕರ್ನಾಟಕ, ತಮಿಳುನಾಡು ಅರಣ್ಯಾಧಿಕಾರಿಗಳ ಹರ ಸಾಹಸ!
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗಟ್ಟಿಗುಂದದಲ್ಲಿ ಹೊಲದಿಂದ ಹಿಂತಿರುಗುತ್ತಿದ್ದ ರೈತ ಸುರೇಶ್ (45) ಎಂಬುವರನ್ನು ಒಂಟಿ ಆನೆ ತುಳಿದು ಕೊಂದಿದೆ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ 38 ವರ್ಷದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ಹೊಲಕ್ಕೆ ಹೋಗುತ್ತಿದ್ದಾಗ ಆನೆ ತುಳಿದು ಕೊಂದು ಹಾಕಿತ್ತು.

ಬೆಂಗಳೂರು: ಕಳೆದ ಐದು ದಿನಗಳಲ್ಲಿ ಇಬ್ಬರನ್ನು ಬಲಿ ಪಡೆದ ಆನೆ ಸೆರೆಗೆ ಕರ್ನಾಟಕ ಮತ್ತು ತಮಿಳುನಾಡು ಅರಣ್ಯಾಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ತಮಿಳುನಾಡಿನ ಗಡಿಭಾಗ ಕೋಡಿಹಳ್ಳಿ ವಲಯ ವ್ಯಾಪ್ತಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬಳಿ ಇಬ್ಬರು ತುಳಿದು ಕೊಂದಿರುವ ಆನೆ ಪತ್ತೆಗೆ ಕರ್ನಾಟಕ ಅರಣ್ಯ ಅಧಿಕಾರಿಗಳು ಎಲ್ಲಾ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ.
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗಟ್ಟಿಗುಂದದಲ್ಲಿ ಹೊಲದಿಂದ ಹಿಂತಿರುಗುತ್ತಿದ್ದ ರೈತ ಸುರೇಶ್ (45) ಎಂಬುವರನ್ನು ಒಂಟಿ ಆನೆ ತುಳಿದು ಕೊಂದಿದೆ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ 38 ವರ್ಷದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ಹೊಲಕ್ಕೆ ಹೋಗುತ್ತಿದ್ದಾಗ ಆನೆ ತುಳಿದು ಕೊಂದು ಹಾಕಿತ್ತು. ಈ ಘಟನೆ ನಡೆದ ಪ್ರದೇಶಗಳ ನಡುವಿನ ಅಂತರವು 6 ಕಿ.ಮೀ. ಆಗಿದ್ದು, ಸಾವಿನಿಂದ ಆಕ್ರೋಶಗೊಂಡ ರೈತರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಬ್ಯಾರಿಕೇಡ್ಗಳನ್ನು ಹಾಕಿ ಆನೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.
'ಮೊದಲು ಬರಗಾಲದಿಂದ ಮತ್ತು ಈಗ ಮಳೆಯಿಂದಾಗಿ ಆನೆಗಳ ಓಡಾಟ ಹೆಚ್ಚುತ್ತಿದೆ. ಆನೆಗಳ ಸಂಖ್ಯೆ ಹೆಚ್ಚಿದೆ. Hejje app ಬಳಸಿ ಒಂದು ಆನೆಯನ್ನು ಗುರುತಿಸಲಾಗಿದೆ. ಆನೆ ಚಲನೆ ಪತ್ತೆಗೆ ರಾತ್ರಿ ವೇಳೆ ಕಾಣುವ ಡ್ರೋನ್ ಬಳಸಲಾಗುತ್ತಿದೆ. ಸದಸ್ಯ ಅದು ತಮಿಳುನಾಡು ಕಡೆಗೆ ಹೋಗಿದೆ. ಇದರ ಬಗ್ಗೆ ನಮ್ಮ ಸಹೋದ್ಯೋಗಿಗಳಿಗೆ ತಿಳಿಸಲಾಗಿದೆ. ಇಬ್ಬರನ್ನು ಕೊಂದಿದ್ದು ಇದೇ ಪ್ರಾಣಿ ಎಂಬುದು ದೃಢಪಟ್ಟ ಬಳಿಕ ಅದನ್ನು ಸೆರೆ ಹಿಡಿಯುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.
ಕಳೆದ ಕೆಲವು ವಾರಗಳಿಂದ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದು, ಆನೆಗಳ ಚಲನವಲನದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ರಾತ್ರಿ ಅಥವಾ ಮುಂಜಾನೆ ಹೊರಗೆ ಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ನಿಯಮಾನುಸಾರ, ಮೃತರ ಕುಟುಂಬ ಸದಸ್ಯರಿಗೆ 15 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



