ದೇಶ

Video: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಢಿಕ್ಕಿ; ನರಳಿ, ನರಳಿ ಹಳಿ ಮೇಲೆಯೇ ಪ್ರಾಣ ಬಿಟ್ಟ ಕಾಡಾನೆ!

ವೇಗವಾಗಿ ಚಲಿಸುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಕಾಡಾನೆ ಡಿಕ್ಕಿ ಹೊಡೆದ ದಾರುಣ ಘಟನೆ ಅಸ್ಸಾಂನಲ್ಲಿ ನಡೆದಿದೆ.

Video: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಢಿಕ್ಕಿ; ನರಳಿ, ನರಳಿ ಹಳಿ ಮೇಲೆಯೇ ಪ್ರಾಣ ಬಿಟ್ಟ ಕಾಡಾನೆ!
ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಢಿಕ್ಕಿಯಾಗಿ ಆನೆ ಸಾವು
Published On :

ಗುವಾಹತಿ: ವೇಗವಾಗಿ ಚಲಿಸುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಕಾಡಾನೆ ಡಿಕ್ಕಿ ಹೊಡೆದ ದಾರುಣ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂನ ಮೊರಿಗಾಂವ್‌ನಲ್ಲಿರುವ ಜಾಗಿರೋಡ್ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದ್ದು, ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆನೆ ಗಂಭೀರವಾಗಿ ಗಾಯಗೊಂಡಿತ್ತು.

ರೈಲಿನ ಹಳಿ ಮೇಲೆ ಬಿದ್ದಿದ್ದ ಆನೆ ಎದ್ದೇಳಲು ಹರಸಾಹಸ ಪಟ್ಟು ಕೊನೆಗೆ ಹಳಿ ಮೇಲೆಯೇ ಪ್ರಾಣ ಬಿಟ್ಟಿದೆ.

ಹೇಗಾಯ್ತು ದುರಂತ

ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲು ಮೊರಿಗಾಂವ್‌ನಲ್ಲಿ ಚಲಿಸುತ್ತಿರುವಾಗ ಕಾಡಾನೆ ಹಿಂಡಿನಿಂದ ಈ ಆನೆ ಬೇರ್ಪಟ್ಟಿದೆ. ಜಾಗಿರೋಡ್ ರೈಲು ನಿಲ್ದಾಣದ ಬಳಿ ಕಾಡಾನೆಗಳೆರಡು ರೈಲು ಹಳಿಯ ಮೇಲೆ ಬಂದಿದ್ದು ಈ ಪೈಕಿ ಒಂದು ಆನೆಗೆ ರೈಲು ಡಿಕ್ಕಿ ಹೊಡೆದಿದೆ. ಮತ್ತೊಂದು ಆನೆ ರೈಲು ಹಳಿಯನ್ನು ಕ್ರಾಸ್ ಮಾಡಿದ್ದು, ಅಪಾಯದಿಂದ ಪಾರಾಗಿದೆ.

ರೈಲಿಗೆ ಡಿಕ್ಕಿ ಹೊಡೆದ ಕಾಡಾನೆ ಸ್ಥಳದಲ್ಲೇ ನರಳಿ, ನರಳಿ ಪ್ರಾಣ ಬಿಟ್ಟಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಕಾಡಾನೆ ನರಳಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಕೊನೆಗೆ ರೈಲ್ವೇ ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ಸತ್ತ ಆನೆಯ ಮೃತದೇಹವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಪಶುವೈದ್ಯರು ಕಾಡಾನೆಯನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.