ಕಾಡಾನೆ

ಕಾಡಾನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಲಾರಿ ಚಾಲಕ: 5 ಸಾವಿರ ರೂ ದಂಡ ವಿಧಿಸಿದ ಅರಣ್ಯ ಇಲಾಖೆ
ಘಟನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಚಾಲಕನನ್ನು ಪತ್ತೆಹಚ್ಚಿದ್ದು, ಕೇರಳದ ಮಲಪ್ಪುರಂ ಮೂಲದ ಜಿನ್‌ಶಾದ್ ಸಿ. ಎಂದು ಗುರುತಿಸಿದ್ದಾರೆ. ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಿದ್ದಕ್ಕಾಗಿ ಹಾಗೂ ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಗಿದೆ.

ವೃದ್ಧ ವ್ಯಕ್ತಿ ಕೊಂದು ಬೆಂಗಳೂರಿಗರ ನಿದ್ದೆಗೆಡಿಸಿದ್ದ ಆನೆ ಕೊನೆಗೂ ಅರಣ್ಯಕ್ಕೆ ವಾಪಸ್..!
ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಕಾರ್ಯಾಚರಣೆ ನಡೆಯುವ ರಾತ್ರಿ ವೇಳೆ ಹೊರಗೆ ತೆರಳದಂತೆ ಸೂಚಿಸಲಾಗಿತ್ತು.

ಕೊಡಗು: ರೋಚಕ ಕಾರ್ಯಾಚರಣೆ; ಕಾರ್ಮಿಕನನ್ನು ಕೊಂದಿದ್ದ ಕಾಡಾನೆ ಸೆರೆ; ಅರಿವಳಿಕೆ ಮದ್ದು ನೀಡಿ ವಶಕ್ಕೆ ಪಡೆದ ಅರಣ್ಯ ಇಲಾಖೆ! Video
ಶಾರ್ಪ್‌ಶೂಟರ್ ರಂಜನ್ ಅವರು ಕಾಡಾನೆಗೆ ಅರಿವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಯಿತು.

ಕೊಡಗಿನಲ್ಲಿ ಪುಂಡಾಟ ಮೆರೆದ ಕಾಡಾನೆ ಸೆರೆ; ದುಬಾರೆ ಆನೆ ಶಿಬಿರಕ್ಕೆ ಶಿಫ್ಟ್..!
ಈ ವರ್ಷದ ಜನವರಿಯಿಂದ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಅಮ್ಮತ್ತಿ-ಸಿದ್ದಾಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಕೊಡಗು: ಅಮ್ಮಾ, ಎದ್ದೇಳಮ್ಮಾ... ತಾಯಿಯ ಶವದ ಪಕ್ಕ ಮರಿಯಾನೆಯ ಮೂಕ ರೋಧನೆ; ಕರುಳು ಹಿಂಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; Video
ಸುಮಾರು 30 ವರ್ಷ ವಯಸ್ಸಿನ ಹೆಣ್ಣು ಆನೆ ಗ್ರಾಮದ ಖಾಸಗಿ ಎಸ್ಟೇಟ್‌ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ದಿದೆ. ಆನೆ ಮರಿಯ ಗೋಳಾಟದ ದೃಶ್ಯ ಕಂಡ ಗ್ರಾಮಸ್ಥರು ಭಾವುಕರಾದರು.

ರೈಲ್ವೆ ಬ್ಯಾರಿಕೇಡ್ ಗೆ ಸಿಲುಕಿ ಒದ್ದಾಡಿದ ಆನೆ; ಅರಣ್ಯ ಇಲಾಖೆ ಹರಸಾಹಸ, ಕೊನೆಗೂ ಉಳಿಯಿತು ಜೀವ! Video
ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿ ಅರೆಕೊಪ್ಪ ಗ್ರಾಮದ ಬಳಿ ಕಾಡಾನೆಯೊಂದು ನಾಡಿನೊಳಗೆ ಬರಲು ಯತ್ನಿಸಿ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಘಟನೆ ವರದಿಯಾಗಿದೆ.

ಖಾನಾಪುರ ಪಟ್ಟಣದಲ್ಲಿ ಕಾಡಾನೆ ಪ್ರತ್ಯಕ್ಷ: ಕೆಲಕಾಲ ಆತಂಕ ಸೃಷ್ಟಿ; ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ
ಮಾಹಿತಿ ತಿಳಿದ ಕೂಡಲೇ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರ್ಗಿ ಹಾಗೂ ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು.

Watch | "ರಾಜ್ಯದ ಶೇಕಡಾ 30ರಷ್ಟು ಜನ ಪ್ರತಿನಿಧಿಗಳು ಭ್ರಷ್ಟರು"; ಮೊದಲ ಬಾರಿಗೆ ಶಾಸಕರಾದವರಿಗೆ ಮಂತ್ರಿಗಿರಿ ಕೊಡಿ: ಹೈ ಕಮಾಂಡ್ ಗೆ ಕೈ ಶಾಸಕರ ಆಗ್ರಹ

Video: ಮೊರಾರ್ಜಿ ಶಾಲಾ ಆವರಣಕ್ಕೆ ನುಗ್ಗಿದ ಒಂಟಿ ಸಲಗ, ಬೆಚ್ಚಿ ಬಿದ್ದ ವಿದ್ಯಾರ್ಥಿಗಳು!
ಆನೆಯನ್ನು ಕಂಡ ಶಾಲೆ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಬೋಧಕೇತರ ಸಿಬ್ಬಂದಿ ಕಟ್ಟಡದಿಂದ ಹೊರಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.

