'ಎಲ್ಲಾ ಹಣೆಬರಹ.. ನಾವೇನು ಮಾಡೋಕ್ಕಾಗಲ್ಲ…': ದರ್ಶನ್ ಕೇಸ್ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ
ನ್ಯಾಯ ಏನಿದೆಯೋ ಅದು ಆಗುತ್ತದೆ. ಇದೆಲ್ಲ ಹಣೆಬರಹ ನಾವೇನು ಮಾಡೋಕಾಗಲ್ಲ. ನಾವು ಏನು ಮಾಡುತ್ತೀವೋ ಅದು ಸರಿನಾ ಎಂದು ಯೋಚನೆ ಮಾಡಬೇಕು.

ಬೆಂಗಳೂರು/ಮಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿದ್ದು, ಈ ಪ್ರಕರಣ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಈ ನಡುವಲ್ಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.
ಎಲ್ಲಾ ಹಣೆಬರಹ ಏನೂ ಮಾಡೋಕಾಗಲ್ಲ. ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್. ಒಳ್ಳೆಯದು ಕೆಟ್ಟದ್ದು ಎರಡೂ ನಡೆಯುತ್ತದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಎಲ್ಲರಿಗೂ ಒಂದು ನ್ಯಾಯ ಸಿಗಬೇಕು. ಎಲ್ಲಾ ಕುಟುಂಬಕ್ಕೂ ಒಳ್ಳೆದಾಗಬೇಕು ಎಂದು ಹೇಳಿದ್ದಾರೆ.
ನ್ಯಾಯ ಏನಿದೆಯೋ ಅದು ಆಗುತ್ತದೆ. ಇದೆಲ್ಲ ಹಣೆಬರಹ ನಾವೇನು ಮಾಡೋಕಾಗಲ್ಲ. ನಾವು ಏನು ಮಾಡುತ್ತೀವೋ ಅದು ಸರಿನಾ ಎಂದು ಯೋಚನೆ ಮಾಡಬೇಕು. ಈ ಘಟನೆಯಿಂದ ರೇಣುಕಾಸ್ವಾಮಿ ಕುಟುಂಬ, ದರ್ಶನ್ ಅವರ ಕುಟುಂಬಕ್ಕೆ ನೋವಾಗಿರುತ್ತೆ. ನ್ಯಾಯ ಏನಿದೆಯೋ ನೋಡೋಣ. ಈಗ ಮಾತಾಡಿ ಪ್ರಯೋಜನ ಇಲ್ಲ ಎಂದು ತಿಳಿಸಿದರು.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಣ ಮಾಡಿಕೊಂಡು ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ ಆರೋಪ ದರ್ಶನ್ ಹಾಗೂ ಗ್ಯಾಂಗ್ ಮೇಲಿದೆ. ತನಿಖೆ ಪ್ರಗತಿಯಲ್ಲಿದ್ದು, ಪ್ರಮುಖ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



