ಬೆಂಗಳೂರು: ಸಹೋದ್ಯೋಗಿಯನ್ನು ಊಟಕ್ಕೆ ಕರೆದು, ಖಾಸಗಿ ಕಂಪನಿ ಮ್ಯಾನೇಜರ್ ನಿಂದ ಅತ್ಯಾಚಾರ
ಊಟಕ್ಕೆ ಕರೆದು ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಊಟಕ್ಕೆ ಕರೆದು ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಕೆಆರ್ ಪುರಂ ನಿವಾಸಿ ಸೈಯದ್ ಅಕ್ರಮ್ (37) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಂತ್ರಸ್ತೆ ಮತ್ತು ಅವರ ಪತಿ ಬಸವೇಶ್ವರನಗರದಲ್ಲಿರುವ ಸಂಸ್ಥೆಯಲ್ಲಿ ಟೆಲಿಕಾಲರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಘಟನೆಯ ದಿನ ಮಹಿಳೆಯ ಪತಿ ಕುಟುಂಬದ ಸದಸ್ಯರ ಅಂತಿಮ ಸಂಸ್ಕಾರಕ್ಕಾಗಿ ತವರು ಮನೆಗೆ ಹೋಗಬೇಕಾಗಿತ್ತು ಹೀಗಾಗಿ ರಜೆ ತೆಗೆದುಕೊಂಡಿದ್ದರು. ಅಕ್ರಮ್ ಕರೆ ಮಾಡಿ ಆಕೆಯನ್ನು ಹೋಟೆಲ್‌ಗೆ ಊಟಕ್ಕೆ ಆಹ್ವಾನಿಸಿದರು, ಕಂಪನಿಯ ಇತರ ಸಹೋದ್ಯೋಗಿಗಳು ಸಹ ಬರುತ್ತಾರೆ ಎಂದು ಹೇಳಿದ್ದಾನೆ.
ನಂತರ ಅಕ್ರಂ ಕಚೇರಿ ಬಳಿ ಬಂದು ಆಕೆಯನ್ನು ತನ್ನ ಬೈಕ್‌ನಲ್ಲಿ ತನ್ನ ಮನೆಗೆ ಕರೆದೊಯ್ದನು, ಅಲ್ಲಿ ಆತನ ಕುಟುಂಬ ಸದಸ್ಯರು ಇರಲಿಲ್ಲ ರೇಪ್ ಮಾಡಿದ ನಂತರ ನವರಂಗ್ ಸರ್ಕಲ್ ಬಳಿ ಆಕೆಯನ್ನು ಇಳಿಸಿ ಹೋಗಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.
ಮಹಿಳೆ ಆಟೋದಲ್ಲಿ ಮನೆಗೆ ಹಿಂತಿರುಗಿ ಪತಿ ಹಿಂದಿರುಗುವವರೆಗೆ ಕಾಯುತ್ತಿದ್ದರು. ಮಂಗಳವಾರ ಪತಿ ಮನೆಗೆ ಬಂದು ನಡೆದ ವಿಷಯವನ್ನು ತಿಳಿಸಿದಾಗ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿದ್ದಾರೆ. ಕೂಡಲೇ ಕಚೇರಿ ಬಳಿ ಆರೋಪಿಯನ್ನು ಬಂಧಿಸಲಾಯಿತು. ಕಡ್ಡಾಯ ವೈದ್ಯಕೀಯ ಪರೀಕ್ಷೆಗಳ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


