ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕೆಬಿಬಿ ಮುಂದು!
ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿಯು (ಕೆಬಿಬಿ) ಮುಂದಾಗಿದೆ. ಇದರ ಜೊತೆಗೆ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಶೋಲಾ ಹುಲ್ಲುಗಾವಲು ಹಾಗೂ ಕಾಡು ಹಣ್ಣಿನ ಪ್ರಭೇದಗಳ ಅಧ್ಯಯನವನ್ನೂ ಕೂಡ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿಯು (ಕೆಬಿಬಿ) ಮುಂದಾಗಿದೆ. ಇದರ ಜೊತೆಗೆ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಶೋಲಾ ಹುಲ್ಲುಗಾವಲು ಹಾಗೂ ಕಾಡು ಹಣ್ಣಿನ ಪ್ರಭೇದಗಳ ಅಧ್ಯಯನವನ್ನೂ ಕೂಡ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಔಷಧೀಯ ಮತ್ತು ಸುವಾಸನೆ ಭರಿತ ಸಸ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಮುಖವಾಗಿ ಆರೋಗ್ಯ ಮತ್ತು ಸೌಂದರ್ಯವರ್ಧಕ ಉದ್ಯಮಗಳಿಂದ ಇವುಗಳಿಗೆ ಬೇಡಿಕೆಗಳು ಹೆಚ್ಚಾಗಿ ಬರುತ್ತಿವೆ. ಇವುಗಳ ಕುರಿತ ಅರಿವು ಹಾಗೂ ಸಂಗ್ರಹಣೆ ಸೀಮಿತವಾಗಿದ್ದು, ಬುಡಕಟ್ಟು ಜನಾಂದವರು ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವುದು, ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಇದರಿಂದ ಅರಣ್ಯಕ್ಕೆ ಧಕ್ಕೆಯಾಗುತ್ತಿದೆ. ಬುಡಕಟ್ಟು ಜನಾಂಗದವರಿಗೆ ಅತ್ಯಂತ ಕಡಿಮೆ ಹಣವನ್ನು ಕೊಟ್ಟು, ಗಿಡಮೂಲಿಕೆಗಳನ್ನು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಲಾಗಿದೆ.
ಅಕ್ರಮಗಳ ವಿರುದ್ಧ ಹಲವಾರು ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಹೀಗಾಗಿ ಅಧ್ಯಯನದ ಮೂಲಕ ಸಸ್ಯಗಳ ಪ್ರದೇಶಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಔಷಧೀಯ ಸಸ್ಯಗಳ ರಕ್ಷಣೆಯನ್ನು ಅರ್ಥ ಮಾಡಿಕೊಳ್ಳಬೇಕಿದ್ದು, ಅಧ್ಯಯನ ಜನರಿಗೆ ಸಹಾಯ ಮಾಡಲಿದೆ. 2025ರ ವೇಳೆಗೆ ಅಧ್ಯಯನ ಪೂರ್ಣಗೊಳ್ಳುವ ಗುರಿಯಿದೆ ಎಂದು ಕೆಬಿಬಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ಅವರು ಹೇಳಿದ್ದಾರೆ.
ಆದಿವಾಸಿಗಳು ಔಷಧೀಯ ಸಸ್ಯಗಳ ಬೆಲೆ ತಿಳಿಯದೆ ಅವುಗಳನ್ನು ತೆಗೆದು ವಿದೇಶಗಳಿಗೆ ಮಾರಾಟ ಮಾಡುತ್ತಿರುವ ನಿದರ್ಶನಗಳೂ ಕಂಡು ಬಂದಿದೆ. ಹೀಗಾಗಿ ಔಷಧೀಯ ಸಸ್ಯಗಳುತ ಅವುಗಳನ್ನು ಬೆಳೆಯುತ್ತಿರುವ ಪ್ರದೇಶಗಳ ರಕ್ಷಣೆ ಮಾಡಲು, ದುರುಪಯೋಗಕ್ಕೆ ಕಡಿವಾಣ ಹಾಕಲು ಅಧ್ಯಯನವು ನಮಗೆ ಸಹಾಯ ಮಾಡುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



