5 ಲಕ್ಷ ಕೊಡದಿದ್ದರೆ ಅಳಿಯನಿಗೆ ನಗ್ನ ಫೋಟೋ ಕಳಿಸ್ತೀನಿ: ಜೈಲಿನಲ್ಲಿದ್ದುಕೊಂಡೆ ರೌಡಿಯಿಂದ ಮಹಿಳೆಗೆ ಬ್ಲ್ಯಾಕ್ ಮೇಲ್!
ಜೈಲಿನಲ್ಲಿದ್ದುಕೊಂಡೆ ಮಹಿಳೆಗೆ ಹಣಕ್ಕಾಗಿ ರೌಡಿಯೊಬ್ಬ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳ ತಿರುಚಿದ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ.

ಬೆಂಗಳೂರು: ಜೈಲಿನಲ್ಲಿದ್ದುಕೊಂಡೆ ಮಹಿಳೆಗೆ ಹಣಕ್ಕಾಗಿ ರೌಡಿಯೊಬ್ಬ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳ ತಿರುಚಿದ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ.
ರೌಡಿ ಮನೋಜ್ ಅಲಿಯಾಸ್ ಕೆಂಚ ಬೆತ್ತಲೆ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದವನು. ಕಳೆದ ಆಗಸ್ಟ್‌ನಲ್ಲಿ ಈ ರೌಡಿ ಮನೋಜ್ ಮತ್ತವನ ಗ್ಯಾಂಗ್ ಯುವತಿಯ ತಾಯಿಗೆ ಫೋಟೊ ಕಳಿಸಿ ಹಣ ಕಿತ್ತಿತ್ತು. ʼಹಣ ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೊ ನಿನ್ನ ಅಳಿಯನಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದ. ಹೀಗೆ ಫೋಟೊ ತೋರಿಸಿ ತಾಯಿಯಿಂದ 40 ಸಾವಿರ ಹಣ ಕಿತ್ತಿದ್ದ. ಅದರಂತೆ ಮಹಿಳೆ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ರೂ., ಮತ್ತೊಬ್ಬನ ಖಾತೆಗೆ 20 ಸಾವಿರ ರೂ. ಹಣ ಹಾಕಿದ್ದರು.
ಫೆಬ್ರವರಿ 9ರಂದು ಮತ್ತೆ ಮನು ಸಹಚರ ರೌಡಿ ಕಾರ್ತಿಕ್ ಎಂಬಾತ ತಾಯಿಗೆ ಮತ್ತೆ ವಾಟ್ಸ್ಯಾಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಮನು ಕಡೆಯ ಹುಡುಗ ನಾನು. 5 ಲಕ್ಷ ರೂ. ಹಣ ಕೊಡದಿದ್ದರೆ ಫೋಟೊವನ್ನು ನಿನ್ನ ಅಳಿಯನಿಗೆ ಕಳಿಸ್ತೀನಿ ಎಂದು ಅವಾಜ್ ಹಾಕಿದ್ದಾನೆ. ಫೆಬ್ರವರಿ 12ರಂದು ರೌಡಿ ಮನು ಜೈಲಿನಿಂದಲೇ ಕರೆ ಮಾಡಿ ಧಮಕಿ ಹಾಕಿದ್ದಾನೆ.
ಫೋಟೊ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮಹಿಳೆಯ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಆ್ಯಕ್ಟ್ 67, ಐಪಿಸಿ ಸೆಕ್ಷನ್ 34, 384ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಟೌನ್ ಪೊಲೀಸರು ಮತ್ತೊಬ್ಬ ಆರೋಪಿ ಕಾರ್ತಿಕ್ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಮನುವನ್ನ ಜೈಲಿನಿಂದ ಬಾಡಿವಾರೆಂಟ್ ಆಧಾರದ ಮೇಲೆ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



