19 ಮಂದಿಯಿಂದ ವನ್ಯಜೀವಿಗಳ ಅಂಗ, ಕಲಾಕೃತಿಗಳು ವಾಪಸ್
ಸಾರ್ವಜನಿಕರ ಬಳಿ ಇರುವ ವನ್ಯಜೀವಿಗಳ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳನ್ನು ವಾಪಸ್ ಮಾಡುವುದಕ್ಕೆ ಸರ್ಕಾರ ಜ.05 ರಿಂದ 90 ದಿನಗಳ ಕಾಲಾವಕಾಶ ನೀಡಿದ್ದು ಈ ವರೆಗೂ 19 ಮಂದಿ ಸ್ವಯಂ ಪ್ರೇರಣೆಯಿಂದ ವಾಪಸ್ ಮಾಡಿದ್ದಾರೆ.

ಬೆಂಗಳೂರು: ಸಾರ್ವಜನಿಕರ ಬಳಿ ಇರುವ ವನ್ಯಜೀವಿಗಳ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳನ್ನು ವಾಪಸ್ ಮಾಡುವುದಕ್ಕೆ ಸರ್ಕಾರ ಜ.05 ರಿಂದ 90 ದಿನಗಳ ಕಾಲಾವಕಾಶ ನೀಡಿದ್ದು ಈ ವರೆಗೂ 19 ಮಂದಿ ಸ್ವಯಂ ಪ್ರೇರಣೆಯಿಂದ ವಾಪಸ್ ಮಾಡಿದ್ದಾರೆ.
ಅರಣ್ಯ ಇಲಾಖೆ ವನ್ಯಜೀವಿಗಳ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳನ್ನು ವಾಪಸ್ ಪಡೆಯುವ ಅಭಿಯಾನವನ್ನು ಆರಂಭಿಸಿದ್ದು, ಜ.19 ರಿಂದ ಫೆ.07 ವರೆಗೆ 19 ಮಂದಿ ಸ್ವಯಂ ಪ್ರೇರಿತರಾಗಿ, ತಮ್ಮ ಬಳಿ ಇದ್ದ ಅಕ್ರಮ ವಜ್ಯಜೀವಿ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳನ್ನು ವಾಪಸ್ ಮಾಡಿದ್ದಾರೆ.
ಈ ಪೈಕಿ 14 ವಸ್ತುಗಳನ್ನು ಬೆಂಗಳೂರಿನ ನಿವಾಸಿಗಳು ವಾಪಸ್ ನೀಡಿದ್ದರೆ, ನಂತರದ ಸ್ಥಾನದಲ್ಲಿ ಮೈಸೂರು, ಧಾರವಾಡ ಮತ್ತು ದಕ್ಷಿಣ ಕನ್ನಡ ಇದೆ. ವಸ್ತುಗಳ ಪಟ್ಟಿಯಲ್ಲಿ ಆನೆ ದಂತಗಳು, ಹುಲಿ ಉಗುರುಗಳು, ಗೌರ್ ಕೊಂಬುಗಳು, ಜಿಂಕೆ ಚರ್ಮ ಮತ್ತು ಕೊಂಬುಗಳು ಸೇರಿವೆ.
"ಪ್ರತಿಕ್ರಿಯೆ ನಿಧಾನವಾಗಿದೆ, ಆದರೆ ಕ್ರಮೇಣ ಹೆಚ್ಚುತ್ತಿದೆ. ಸಮಯವಿದೆ ಮತ್ತು ಜನರು ಕ್ರಮೇಣ ಬರುತ್ತಾರೆ. ವಾಪಸ್ಸಾತಿಯ ಮಾರ್ಗಸೂಚಿಗಳು ಮತ್ತು ವಿಧಾನ ಆನ್‌ಲೈನ್‌ನಲ್ಲಿದೆ. ಜನರು ರಾಜ್ಯಾದ್ಯಂತ ಯಾವುದೇ ಅರಣ್ಯ ಇಲಾಖೆ ಕಚೇರಿಯಲ್ಲಿ ವಸ್ತುಗಳನ್ನು ಸಲ್ಲಿಸಬಹುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಹೇಳಿದ್ದಾರೆ. ಸಾರ್ವಜನಿಕರಿಗೆ ಏಪ್ರಿಲ್ 9 ರವರೆಗೆ ರಾಜ್ಯ ಸರ್ಕಾರ ಸಮಯ ನೀಡಿದ್ದು, ಈ ಅವಧಿಯಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗುವುದಿಲ್ಲ. ಏಪ್ರಿಲ್ 9 ರ ನಂತರ ವನ್ಯಜೀವಿ ವಸ್ತುಗಳನ್ನು ಹೊಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ 2003 ರಲ್ಲಿ 180 ದಿನಗಳ ಅವಧಿಯೊಂದಿಗೆ ವನ್ಯಜೀವಿ ಕಲಾಕೃತಿಗಳನ್ನು ಒಪ್ಪಿಸಲು ಕೊನೆಯ ಬಾರಿಗೆ ಅವಕಾಶ ನೀಡಿತ್ತು. ವ್ಯಕ್ತಿಗಳು ವನ್ಯಜೀವಿ ಅಂಗಗಳು ಮತ್ತು ದೇಹದ ಭಾಗಗಳಿಂದ ಮಾಡಲ್ಪಟ್ಟ ಕಲಾಕೃತಿಗಳಿಗೆ ಮಾಲೀಕತ್ವದ ಪ್ರಮಾಣಪತ್ರಗಳನ್ನು ಪಡೆಯಲ ಮೊದಲ ಅವಕಾಶವನ್ನು 1973 ರಲ್ಲಿ ವನ್ಯಜೀವಿ ಸಂರಕ್ಷಣೆ (ಕರ್ನಾಟಕ ನಿಯಮಗಳು), 1973 ರ ನಿಯಮ 34 (1) ರ ಅಡಿಯಲ್ಲಿ 30 ದಿನಗಳವರೆಗೆ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


