ರಾಜ್ಯ

ಬೆಂಗಳೂರಿನಲ್ಲಿ ಮಿತಿ ಮೀರಿದ ಬೀದಿನಾಯಿ ಹಾವಳಿ; ಮೂರು ದಿನಗಳಲ್ಲಿ 2ನೇ ಪ್ರಕರಣ

ಬೆಂಗಳೂರಿನಲ್ಲಿ ಗಂಗಮ್ಮನಗುಡಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ವೃದ್ಧೆಯೊಬ್ಬರು ಸಾವನ್ನಪ್ಪಿದ ಎರಡು ದಿನಗಳ ನಂತರ, ಶುಕ್ರವಾರ ಬೆಳಿಗ್ಗೆ ಒಎಂಬಿಆರ್ ಲೇಔಟ್‌ನಲ್ಲಿ 40 ವರ್ಷದ ಮಹಿಳೆಯೊಬ್ಬರ ಮೇಲೆ ನಾಯಿಯೊಂದು ದಾಳಿ ಮಾಡಿದೆ.

ಬೆಂಗಳೂರಿನಲ್ಲಿ ಮಿತಿ ಮೀರಿದ ಬೀದಿನಾಯಿ ಹಾವಳಿ; ಮೂರು ದಿನಗಳಲ್ಲಿ 2ನೇ ಪ್ರಕರಣ
ಮಹಿಳೆಗೆ ಕಚ್ಚಿದ ಬೀದಿ ನಾಯಿ
Published On :

ಬೆಂಗಳೂರು: ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಕೇವಲ ಮೂರು ದಿನಗಳ ಅಂತರದಲ್ಲಿ 2ನೇ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಗಂಗಮ್ಮನಗುಡಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ವೃದ್ಧೆಯೊಬ್ಬರು ಸಾವನ್ನಪ್ಪಿದ ಎರಡು ದಿನಗಳ ನಂತರ, ಶುಕ್ರವಾರ ಬೆಳಿಗ್ಗೆ ಒಎಂಬಿಆರ್ ಲೇಔಟ್‌ನಲ್ಲಿ 40 ವರ್ಷದ ಮಹಿಳೆಯೊಬ್ಬರ ಮೇಲೆ ನಾಯಿಯೊಂದು ದಾಳಿ ಮಾಡಿದೆ.

ಮಹಿಳೆಯ ಮೇಲೆ ನಾಯಿ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ವೀಡಿಯೋದಲ್ಲಿರುವಂತೆ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಬೀದಿನಾಯಿಯೊಂದು ಆಕೆಯ ಮೇಲೆ ದಾಳಿ ಮಾಡಿ ಪಾದಕ್ಕೆ ಕಚ್ಚಿದೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ನಾಯಿಯನ್ನು ಓಡಿಸಿದ್ದಾರೆ. ಇದರಿಂದ ಆಗಬಹುದಾಗಿದ್ದ ಮತ್ತೊಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಇನ್ನು ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಲ್ಲಪ್ಪ ಭಜಂತ್ರಿ ಅವರು ಸ್ಥಳಕ್ಕೆ ಆಗಮಿಸಿ, 10 ದಿನಗಳ ಕಾಲ ನಾಯಿಯನ್ನು ಹಿಡಿದು ರೇಬಿಸ್ ಸೋಂಕಿತರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಏತನ್ಮಧ್ಯೆ, ಪ್ರಾಣಿ ಪ್ರೇಮಿ ಮತ್ತು ಹೋರಾಟಗಾರ್ತಿ ಸುನಾಥ ಪ್ರಸನ್ನ ಮಾತನಾಡಿ, ಬೀದಿ ನಾಯಿಗಳು ಸಾಮಾನ್ಯವಾಗಿ ಹಸಿವಾದಾಗ, ಪ್ರಚೋದನೆಯಾದಾಗ ಅಥವಾ ಹೆಣ್ಣು ನಾಯಿ ಮರಿ ಹಾಕಿದಾಗ ಆಕ್ರಮಣಶೀಲವಾಗುತ್ತವೆ. ಕೆಲವೊಮ್ಮೆ, ಪ್ರದೇಶದ ಸಮಸ್ಯೆಗಳಿಂದಾಗಿ, ನಾಯಿಯನ್ನು ಬೇರೆ ಸ್ಥಳದಲ್ಲಿ ಬಿಟ್ಟರೆ ಮತ್ತು ಪ್ರಾಣಿಯು ಆಹಾರವನ್ನು ಹುಡುಕಲು ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡರೆ, ಆಕ್ರಮಣಶೀಲತೆಯ ಸಾಧ್ಯತೆಗಳಿರುತ್ತವೆ ಮತ್ತು ಅಂತಹ ಸಮಯದಲ್ಲಿ, ಇಂತಹ ಒಂದು ಅಥವಾ ಎರಡು ಘಟನೆಗಳು ಘಟಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.