ಬೆಂಗಳೂರು: ಮಳೆ, ಗಾಳಿಯಿಂದ ಬೀಳುವ ಮರ ತೆರವಿಗೆ 28 ತಂಡ ರಚಿಸಿದ BBMP
ಎಂಟು ಸದಸ್ಯರು ಮತ್ತು ತೆರವು ವಾಹನ ಒಳಗೊಂಡಿರುವ 'ಮರಗಳ ವ್ಯವಸ್ಥಿತ ನಿರ್ವಹಣಾ ತಂಡ' ಮಳೆಗಾಲದಲ್ಲಿ ದುರ್ಬಲಗೊಳ್ಳಬಹುದಾದ ಹಳೆಯ ಮರಗಳು ಮತ್ತು ದುರ್ಬಲವಾದ ರೆಂಬೆ-ಕೊಂಬೆಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ.

ಬೆಂಗಳೂರು: ಮಳೆ ಮತ್ತು ಗಾಳಿಯಿಂದ ಬಿದ್ದ ಮರಗಳನ್ನು ತ್ವರಿತವಾಗಿ ನಿರ್ವಹಿಸಲು ಮತ್ತು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 28 ತಂಡಗಳನ್ನು ರಚಿಸಿದೆ.
ಎಂಟು ಸದಸ್ಯರು ಮತ್ತು ತೆರವು ವಾಹನ ಒಳಗೊಂಡಿರುವ 'ಮರಗಳ ವ್ಯವಸ್ಥಿತ ನಿರ್ವಹಣಾ ತಂಡ' ಮಳೆಗಾಲದಲ್ಲಿ ದುರ್ಬಲಗೊಳ್ಳಬಹುದಾದ ಹಳೆಯ ಮರಗಳು ಮತ್ತು ದುರ್ಬಲವಾದ ರೆಂಬೆ-ಕೊಂಬೆಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ.
ಮಳೆಗಾಲದಲ್ಲಿ ಗಾಳಿ ಹೆಚ್ಚಾಗಿ ನಗರದ ಹಲವೆಡೆ ಮರಗಳು, ರೆಂಬೆ ಕೊಂಬೆಗಳು ಬೀಳುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನಗಳು ಸೇರಿದಂತೆ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಹೀಗಾಗಿ ಮರಗಳ ವ್ಯವಸ್ಥಿತ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ತಂಡಗಳು ಮಳೆ-ಗಾಳಿಯಿಂದ ಬಿದ್ದ ಮರಗಳನ್ನು ತೆರವುಗೊಳಿಸುವುದರ ಜೊತೆಗೆ ತಮ್ಮ ನಿಯೋಜಿತ ಪ್ರದೇಶಗಳಲ್ಲಿ Sahaaya ಆ್ಯಪ್ ಮತ್ತು BBMP ಸಹಾಯವಾಣಿಗಳ ಮೂಲಕ ಸಲ್ಲಿಸಲಾದ ಮರಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



