ರಾಜ್ಯ

ರಾಜಕಾರಣಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕ ಭಾಷಣ ತರಬೇತಿ ನೀಡಬಹುದಲ್ಲವೇ: ಸುರೇಶ್ ಕುಮಾರ್

ಸಾರ್ವಜನಿಕ ಸಂವಾದ ತೀರಾ ಕೆಳಕ್ಕಿಳಿಯುತ್ತಿದೆ. ಏಕವಚನ ಸಂಬೋಧನೆ ರಾರಾಜಿಸುತ್ತಿದೆ. ಜೊತೆಗೆ ವಾಚಾಮಗೋಚರ ಬೈಗುಳ ವಿಜೃಂಭಿಸುತ್ತಿದೆ. ಇದರಿಂದ ಸಮಾಜಕ್ಕೆ, ಅದರಲ್ಲಿಯೂ ವಿಶೇಷವಾಗಿ ಎಳೆಯ ಜನಾಂಗಕ್ಕೆ ಭಾರಿ ತಪ್ಪು ಸಂದೇಶ ಹೋಗುತ್ತಿದೆ.

ರಾಜಕಾರಣಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕ ಭಾಷಣ ತರಬೇತಿ ನೀಡಬಹುದಲ್ಲವೇ: ಸುರೇಶ್ ಕುಮಾರ್
ಎಸ್ ಸುರೇಶ್ ಕುಮಾರ್
Published On :

ಬೆಂಗಳೂರು: ರಾಜಕಾರಣಿಗಳ ನಡುವೆ ಸಾರ್ವಜನಿಕ ಸಂವಹನದ ಗುಣಮಟ್ಟ ಕುಸಿಯುತ್ತಿದೆ, ನಾಯಕರ ಆರೋಪ ಪ್ರತ್ಯಾರೋಪ ಹೇಳಿಕೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ಏಕವಚನ ಪ್ರಯೋಗ, ಕೀಳು ಮಟ್ಟದ ಬೈಗುಳಗಳನ್ನು ಎಲ್ಲರೂ ಮೇಲ್ಪಂಕ್ತಿಯನ್ನಾಗಿ ಸ್ವೀಕರಿಸಿದರೆ ಅನಾಹುತವಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ರಾಜ್ಯದ ಎಲ್ಲಾ ದೊಡ್ಡ ಸ್ಥಾನದ ರಾಜಕೀಯ ನಾಯಕರಲ್ಲಿ ಒಂದು ಮನವಿ. ಸಾರ್ವಜನಿಕ ಸಂವಾದ ತೀರಾ ಕೆಳಕ್ಕಿಳಿಯುತ್ತಿದೆ. ಏಕವಚನ ಸಂಬೋಧನೆ ರಾರಾಜಿಸುತ್ತಿದೆ. ಜೊತೆಗೆ ವಾಚಾಮಗೋಚರ ಬೈಗುಳ ವಿಜೃಂಭಿಸುತ್ತಿದೆ.ಇದರಿಂದ ಸಮಾಜಕ್ಕೆ, ಅದರಲ್ಲಿಯೂ ವಿಶೇಷವಾಗಿ ಎಳೆಯ ಜನಾಂಗಕ್ಕೆ ಭಾರಿ ತಪ್ಪು ಸಂದೇಶ ಹೋಗುತ್ತಿದೆ. ಈ ಏಕವಚನ ಪ್ರಯೋಗ, ಕೀಳು ಮಟ್ಟದ ಬೈಗುಳಗಳನ್ನು ಎಲ್ಲರೂ ಮೇಲ್ಪಂಕ್ತಿಯನ್ನಾಗಿ ಸ್ವೀಕರಿಸಿದರೆ ಅನಾಹುತವಾಗುತ್ತದೆ. ದಯವಿಟ್ಟು ಸಾರ್ವಜನಿಕ ವೇದಿಕೆಗಳನ್ನು ಏಕವಚನ ಹಾಗೂ ಬೈಗುಳಗಳ ತಾಣ ಮಾಡಿಕೊಳ್ಳಬಾರದು. ಇದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೂ ಅನ್ವಯಿಸುತ್ತದೆ’ ಎಂದಿದ್ದಾರೆ.

ನಮ್ಮದೇನೇ ಸಿಟ್ಟು, ಸಾತ್ವಿಕ ಕೋಪ, ಆಕ್ರೋಶ ಇದ್ದರೂ ಅದನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತ ರೀತಿಯ ಮಾತು, ಹಾವಭಾವ ಅಗತ್ಯವಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೆ ಬಹಳ ಮುಖ್ಯ. ಇದು ವಿಧಾನಸಭೆ ಮತ್ತು ಪರಿಷತ್ತಿಗೂ ಅನ್ವಯಿಸುತ್ತದೆ ಎಂದರು. ಸಾರ್ವಜನಿಕ ಜೀವನದಲ್ಲಿ ಬಹುವಚನ ಪ್ರಯೋಗ, ಬೈಗುಳವಿಲ್ಲದೆ ರಾಜಕೀಯ ನಾಯಕರು ಸಂವಹನ ನಡೆಸುವಂತೆ ಕಲಿಸುವ ಶಿಬಿರ ಯೋಜಿಸುವುದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಪಾತ್ರ ವಹಿಸಬಹುದಲ್ಲವೇ? ಎಂದು ಕೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.