ರಾಜ್ಯರಾಜಕಾರಣಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕ ಭಾಷಣ ತರಬೇತಿ ನೀಡಬಹುದಲ್ಲವೇ: ಸುರೇಶ್ ಕುಮಾರ್
ಸಾರ್ವಜನಿಕ ಸಂವಾದ ತೀರಾ ಕೆಳಕ್ಕಿಳಿಯುತ್ತಿದೆ. ಏಕವಚನ ಸಂಬೋಧನೆ ರಾರಾಜಿಸುತ್ತಿದೆ. ಜೊತೆಗೆ ವಾಚಾಮಗೋಚರ ಬೈಗುಳ ವಿಜೃಂಭಿಸುತ್ತಿದೆ. ಇದರಿಂದ ಸಮಾಜಕ್ಕೆ, ಅದರಲ್ಲಿಯೂ ವಿಶೇಷವಾಗಿ ಎಳೆಯ ಜನಾಂಗಕ್ಕೆ ಭಾರಿ ತಪ್ಪು ಸಂದೇಶ ಹೋಗುತ್ತಿದೆ.