9 ವರ್ಷಗಳ ಬಳಿಕ ನೀರಿನ ದರ ಹೆಚ್ಚಳಕ್ಕೆ ಬಿಡಬ್ಲ್ಯೂಎಸ್ಎಸ್'ಬಿ ಮುಂದು!
ನೀರಿನ ದರ ಪರಿಷ್ಕರಿಸುವಂತೆ ಬೆಂಗಳೂರು ಜಲಮಂಡಳಿ ನೂತನವಾಗಿ ರಚನೆಗೊಳ್ಳುವ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದು, ಸರ್ಕಾರ ಸಮ್ಮತಿ ನೀಡಿದ್ದೇ ಆದರೆ, ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.

ಬೆಂಗಳೂರು: ನೀರಿನ ದರ ಪರಿಷ್ಕರಿಸುವಂತೆ ಬೆಂಗಳೂರು ಜಲಮಂಡಳಿ ನೂತನವಾಗಿ ರಚನೆಗೊಳ್ಳುವ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದು, ಸರ್ಕಾರ ಸಮ್ಮತಿ ನೀಡಿದ್ದೇ ಆದರೆ, ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.
ತೊರೆಕಾಡನಹಳ್ಳಿ ಜಲಾಶಯದಿಂದ 90 ಕಿ.ಮೀ ದೂರದವರೆಗೆ ಬೆಂಗಳೂರಿಗೆ ಕಾವೇರಿ ನೀರು ಹರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಪ್ರತಿ ತಿಂಗಳು ಸುಮಾರು 70 ಲಕ್ಷ ರುಪಾಯಿ ವಿದ್ಯುತ್ ಬಿಲ್ ಪಾವತಿ ಮಾಡುತ್ತಿತ್ತು. ವಿದ್ಯುತ್ ದರ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಇದೀಗ 74 ಲಕ್ಷ ರುಪಾಯಿಗಳಿಗೆ ಹೆಚ್ಚಳವಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಇಂಧನ ದರವನ್ನು (ಯೂನಿಟ್‌ಗೆ 70 ಪೈಸೆ) ಶೇ.8.31 ಹೆಚ್ಚಳ ಮಾಡಿದೆ. ಪ್ರಸ್ತುತ ಬಿಡಬ್ಲ್ಯೂಎಸ್ಎಸ್'ಬಿ ಕೆಪಿಟಿಸಿಎಲ್ ಮತ್ತು ಸಿಇಎಸ್'ಸಿಗೆ ಬಿಲ್ ಪಾವತಿ ಮಾಡುತ್ತಿದೆ.
ದರ ಹೆಚ್ಚಳ ಕುರಿತು ಮಾತನಾಡಿದ ಬಿಡಬ್ಲ್ಯುಎಸ್‌ಎಸ್‌ಬಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 6 ತಿಂಗಳ ಹಿಂದೆ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಚುನಾವಣಾ ವರ್ಷ ಹಿನ್ನೆಲೆಯಲ್ಲಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ವಿದ್ಯುತ್ ದರ ಹೆಚ್ಚಾದ ಹಿನ್ನೆಲೆಯಲ್ಲಿ ದರ ಹೆಚ್ಚಳದ ಚಿಂತನೆಗಳು ಬಂದಿದ್ದವು. ಇದೀಗ ಹೊಸ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸುತ್ತೇವೆ. 2014ರ ನವೆಂಬರ್ 2ರಲ್ಲಿ ದರ ಹೆಚ್ಚಳ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಅಸ್ತಿತ್ವದಲ್ಲಿರುವ ನೀರಿನ ದರ ಇಂತಿದೆ...
8,000 ಲೀಟರ್‌ಗಳವರೆಗೆ: ರೂ 7
25,000 ಲೀಟರ್ ವರೆಗೆ: ರೂ 11
50,000 ಲೀಟರ್‌ಗಳವರೆಗೆ: ರೂ 26
50,000 ಲೀಟರ್‌ಗಳಿಗಿಂತ ಹೆಚ್ಚು: ರೂ 45ಗಳಷ್ಟಿದೆ.
ಗೃಹೇತರ ಉದ್ದೇಶಗಳಿಗೆ ಬಳಸುವ ನೀರಿನ ದರ...
10,000 ಲೀಟರ್‌ಗಳವರೆಗೆ: ರೂ 50
25,000 ಲೀಟರ್ ವರೆಗೆ: ರೂ 57
50,000 ಲೀಟರ್ ವರೆಗೆ: ರೂ 65
75,000 ಲೀಟರ್‌ಗಳವರೆಗೆ: ರೂ 76
ಅದಕ್ಕಿಂತ ಹೆಚ್ಚಿನ 75,000 ಲೀಟರ್‌ಗಳು: ರೂ 87ಗಳಷ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


