ಸಿದ್ದರಾಮಯ್ಯ ಅವರಿಗೆ ಆಡಳಿತದ ಅನುಭವ ಹೆಚ್ಚು: ಸತೀಶ್ ಜಾರಕಿಹೊಳಿ
ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಬಹುತೇಕ ಅಂತಿಮವಾಗುತ್ತಿದ್ದಂತೆಯೇ, ಅವರಿಗೆ ಸತೀಶ್ ಜಾರಕಿಹೊಳಿ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಬಹುತೇಕ ಅಂತಿಮವಾಗುತ್ತಿದ್ದಂತೆಯೇ, ಅವರಿಗೆ ಸತೀಶ್ ಜಾರಕಿಹೊಳಿ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರಿಗೆ ಆಡಳಿತ ಅನುಭವ ಇದೆ. ಕಳೆದ ಬಾರಿಯಂತೆ ಈ ಬಾರಿಯೂ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ ಎಂದರು.
ಅಂತೆಯೇ ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ. ಸೀಕ್ರೆಟ್ ಬ್ಯಾಲೆಟ್ ಮಾನದಂಡದ ಮೇಲೆ ಸಿದ್ದರಾಮಯ್ಯ ಆಯ್ಕೆ ನಡೆದಿದೆ. ಡಿಕೆ ಶಿವಕುಮಾರ್ ಡಿಸಿಎಂ ಆಗಬಹುದೂ ಅಥವಾ ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಪಕ್ಷಕ್ಕಾಗಿ ದುಡಿಯುತ್ತೇವೆ. ಅಂತೆಯೇ ಲೋಕಸಭೆ ಚುನಾವಣೆ ಕೂಡ ಮಾಡ್ತೇವೆ ಎಂದರು.
ಡಿಸಿಎಂ ಹುದ್ದೆಗೆ ಸತೀಶ್ ಪಟ್ಟು
ಇದೇ ವೇಳೆ ನಾನೂ ಕೂಡ ಡಿಸಿಎಂ ಸ್ಥಾನಕ್ಕಾಗಿ ಒತ್ತಾಯಿಸುತ್ತೇನೆ ಎಂದ ಸತೀಶ್ ಜಾರಕಿಹೊಳಿ, ಬೇರೆ ಸಮುದಾಯಕ್ಕೆ ಡಿಸಿಎಂ ಹುದ್ದೆ ಕೊಟ್ಟರೆ ನಾನು ಕೂಡ ಪಕ್ಷವನ್ನು ಕೇಳುತ್ತೇನೆ. ವೈಯಕ್ತಿಕವಾಗಿ ಡಿಸಿಎಂ ಬೇಡ, ಸಚಿವನಾಗಿಯೇ ಇರ್ತೀನಿ. ಡಿಕೆ ಶಿವಕುಮಾರ್ ಕೆಲಸ ಕೊಡುಗೆ ಬಹಳ ಇದೆ. ಅವರ ಮಧ್ಯೆ ಸಮಾಧಾನಕರ ರೀತಿಯಲ್ಲೇ ಸಂಧಾನ ಆಗಿದೆ. ಒಬ್ಬರೇ ಸಿಎಂ-ಡಿಸಿಎಂ ಇದ್ದರೆ ಒಳ್ಳೆಯದು ಎಂದು ಸತೀಶ್ ಹೇಳಿದರು.
ಇನ್ನು ಮೂಲಗಳ ಪ್ರಕಾರ ನಾಳೆ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಅಧಿಕಾರಿಗಳು, ಪೊಲೀಸರು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


