Satish Jarakiholi

ಸಚಿವ ಸತೀಶ್ ಜಾರಕಿಹೊಳಿ ಹೂಡಿಕೆಗಳ ಜಾಡು; ಆಫ್ರಿಕಾದ ಕಾಂಗೋ ತನಿಖೆಯ ಕೇಂದ್ರಬಿಂದು: ED ಎಕ್ಸ್ ಪೋಸ್ಟ್ ನಲ್ಲಿ ಏನಿದೆ?
ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಅಬಕಾರಿ ಜಂಟಿ ಆಯುಕ್ತ ವೈ.ಡಿ. ಮಂಜುನಾಥ್ ಅವರ ಪತ್ನಿ ಮಹಾದೇವಿ ಮಂಜುನಾಥ್ ಮತ್ತು ಕುಟುಂಬ ಸದಸ್ಯರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರುಪಾಲುಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ED ತಿಳಿಸಿದೆ.

'ಅವ್ರಿಗೆ ಸಾತ್ ಖೂನ್ ಮಾಫ್, ಬಿಜೆಪಿಗೆ ಭ್ರಷ್ಟ ರಾಜಕಾರಣಿಗಳು ಹೋದ ತಕ್ಷಣ ಗಂಗಾ ಜಲದಿಂದ ಪವಿತ್ರ ಆಗ್ಬಿಡ್ತಾರೆ': ಪ್ರಿಯಾಂಕ್ ಖರ್ಗೆ; Video
ಇಂತಹ 196 ಇಡಿ ದಾಳಿಗಳು ಆಗಿವೆ ಎಂದು ನಾನು ಅಂಕಿ ಅಂಶ ಕೊಟ್ಟಿದ್ದೆ. ಎರಡು ಕೇಸ್‌ನಲ್ಲಿ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವಾ? ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

'ಎದೆಗುಂದಬೇಡಿ, ಧೈರ್ಯವಾಗಿರಿ': ED ದಾಳಿ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಸಿಎಂ ಸೇರಿ ಕಾಂಗ್ರೆಸ್ ನಾಯಕರ ಭೇಟಿ, ಅಭಯ; Video
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸತೀಶ್ ಅವರ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿರುವ ನಿವಾಸದ ಮೇಲೆ ಎರಡು ದಿನಗಳ ಕಾಲ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ, ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹಾಗೂ ಪುತ್ರ ರಾಹುಲ್ ಅವರಿಗೆ ಸಂಬಂಧಿಸಿದಂತಹ ಸ್ಥಳಗಳ ಮೇಲೂ ದಾಳಿ ನಡೆಸಿದ್ದರು.

ವಿರೋಧ ಪಕ್ಷದ ದಲಿತ ನಾಯಕರನ್ನು ಬೆದರಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ಬಿ.ಕೆ ಹರಿಪ್ರಸಾದ್; Video
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿ ನಡೆಯುತ್ತಿರುವ ಹೊಸ ತನಿಖೆಯ ಭಾಗವಾಗಿ ಕರ್ನಾಟಕದ ಸುಮಾರು 18 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಇದು ರಾಜಕೀಯ ಪ್ರೇರಿತ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರ ಮೇಲೆ BJP ಇಡಿ ದಾಳಿ ಮಾಡಿಸಬಹುದು': ಡಿ.ಕೆ ಶಿವಕುಮಾರ್; Video
ಸತೀಶ್ ಜಾರಕಿಹೊಳಿ ಅವರು ದಲಿತ ನಾಯಕರು, ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ, ಇದು ಮುಂದೆ ಅವರಿಗೇ ತಿರುಗುಬಾಣವಾಗಲಿದೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ ನಿವಾಸ ಮೇಲೆ ದಾಳಿ ಏಕೆ; ED ಹೇಳಿದ್ದೇನು? Video
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸ, ಸರ್ಕಾರಿ ವಸತಿ ಗೃಹಗಳು ಹಾಗೂ ಬೆಳಗಾವಿ ಮತ್ತು ಗೋಕಾಕ್‌ನಲ್ಲಿರುವ ಆಸ್ತಿಗಳ ಮೇಲೂ ಶೋಧ ನಡೆಸಲಾಗಿದೆ.

ಇದು ಆರಂಭವಷ್ಟೆ.. ನೋಡ್ತಿರಿ.. ನನ್ನ ಮೇಲೆ, ಡಿಕೆಶಿ ಮೇಲೆ ಕೂಡ ಇಡಿ ದಾಳಿಯಾಗಬಹುದು: ಪ್ರಿಯಾಂಕ್ ಖರ್ಗೆ; Video
ಮುಂದಿನ ವಿಧಾನಸಭೆ ಚುನಾವಣೆಯನ್ನು ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿಯೊಂದಿಗೆ ಮಾಡಲು ಯೋಜಿಸುತ್ತಿದೆಯೇ ಹೊರತು ಬಿಜೆಪಿ ನಾಯಕರೊಂದಿಗೆ ಅಲ್ಲ ಎಂದು ಟೀಕಿಸಿದರು.

ಲೋಕಾಯುಕ್ತ ಕ್ಲೀನ್‌ಚಿಟ್ ಕೊಟ್ಟಿದೆ, ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ: ಸತೀಶ್ ಜಾರಕಿಹೊಳಿ; Video
ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದ ಪ್ರಸಂಗ ನಡೆದಿದೆ.

ಸತೀಶ್ ಜಾರಕಿಹೊಳಿ ಭಾವೀ DCM: ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಅಭಿಮಾನಿಗಳಿಂದ ಪೋಸ್ಟರ್ ವೈರಲ್
ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸತೀಶ್ ಜಾರಕಿಹೊಳಿ ಅವರು ಈ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

