ಜುಲೈ 9 ರಿಂದ 16ರವರೆಗೆ ಜಿ20 ಶೃಂಗಸಭೆಯ ಮೂರನೇ ಶೆರ್ಪಾ ಸಭೆ: ಹಂಪಿಯಲ್ಲಿ 43 ರಾಷ್ಟ್ರಗಳು ಭಾಗಿ
ಜುಲೈ 9 ರಿಂದ 16ರವರೆಗೆ ವಿಶ್ವಪ್ರಸಿದ್ದ ಹಂಪಿಯಲ್ಲಿ ನಡೆಯುವ ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆಯಲ್ಲಿ ಜಾಗತಿಕ ಮಟ್ಟದ ಒಟ್ಟು ಜಿ20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿ 43 ರಾಷ್ಟ್ರಗಳು ಭಾಗವಹಿಸಲಿವೆ.

ಹೊಸಪೇಟೆ: ಜುಲೈ 9 ರಿಂದ 16ರವರೆಗೆ ಹಂಪಿಯಲ್ಲಿ ನಡೆಯುವ ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆಯಲ್ಲಿ ಜಾಗತಿಕ ಮಟ್ಟದ ಒಟ್ಟು ಜಿ20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿ 43 ರಾಷ್ಟ್ರಗಳು ಭಾಗವಹಿಸಲಿವೆ.
ಭಾನುವಾರ ನೀತಿ ಆಯೋಗದ ಸಿಇಒ ಮತ್ತು ಜಿ20 ಶೃಂಗಸಭೆ ಆಯೋಜನೆಯ ಮುಖ್ಯಸ್ಥ (ಶೆರ್ಪಾ) ಅಮಿತಾಭ್ ಕಾಂತ್ ಅವರು ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಿದ್ಧತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು.
'ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಈ ಶೆರ್ಪಾ ಸಭೆಯು 'ವಸುದೈವ ಕುಟುಂಬಕಂ' ಎಂಬ ಧ್ಯೇಯದಡಿ, 'ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ' ಎಂಬ ಘೋಷವಾಕ್ಯದಡಿ ಶೃಂಗಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಜಿ20 ಶೃಂಗಸಭೆಯ ಮೂರನೆೇ ಶೆರ್ಪಾ ಸಭೆಗಳು ಜುಲೈ 9 ರಿಂದ 16 ರವರೆಗೆ ಹಂಪಿಯಲ್ಲಿ ನಡೆಯಲಿದೆ. ನಾನು ಅಧಿಕಾರಿಗಳೊಂದಿಗೆ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ' ಎಂದು ಕಾಂತ್ ಹೇಳಿದರು.
ಈ ಬಾರಿ ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದು, ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜು. 9 ರಿಂದ 16ರ ವರೆಗೆ ನಡೆಯಲಿದೆ. ಇದರಲ್ಲಿ 43 ದೇಶಗಳ ಉನ್ನತಮಟ್ಟದ ಅಧಿಕಾರವುಳ್ಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಂತರರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.
ಈಗಾಗಲೇ ರಾಜಸ್ಥಾನದ ಉದಯಪುರ, ಅಸ್ಸಾಮಿನ ಕುಮಾರ್ಗಮ್‌ನಲ್ಲಿ ಶೆರ್ಪಾ ಸಭೆಗಳು ನಡೆದಿವೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಹಿರಿಮೆ ಮತ್ತು ಉತ್ಪನ್ನಗಳನ್ನು ಉನ್ನತೀಕರಿಸಲು 3ನೇ ಶೆರ್ಪಾ ಸಭೆ ವಿಶ್ವವಿಖ್ಯಾತ ಪಾರಂಪರಿಕ ತಾಣ ಹಂಪಿಯಲ್ಲಿ ನಡೆಯಲಿದೆ.
ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ ಮಾತನಾಡಿ, ಸಭೆಗಳನ್ನು ಯಶಸ್ವಿಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


