ರಾಜ್ಯ

ನಾವು ಘರ್ ವಾಪ್ಸಿ ಕಾರ್ಯಕ್ಕೆ ಕೈಹಾಕಿದರೆ ಜೆಡಿಎಸ್ -ಬಿಜೆಪಿ ಅರ್ಧದಷ್ಟು ಖಾಲಿ: ಪ್ರಿಯಾಂಕ್ ಖರ್ಗೆ

ನಾವು ಘರ್ ವಾಪ್ಸಿ ಹೆಸರಿನಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ಕೆ ಕೈಹಾಕಿದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಅರ್ಧದಷ್ಟು ಖಾಲಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಾವು ಘರ್ ವಾಪ್ಸಿ ಕಾರ್ಯಕ್ಕೆ ಕೈಹಾಕಿದರೆ ಜೆಡಿಎಸ್ -ಬಿಜೆಪಿ ಅರ್ಧದಷ್ಟು ಖಾಲಿ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Published On :

ಬೆಂಗಳೂರು: ನಾವು ಘರ್ ವಾಪ್ಸಿ ಹೆಸರಿನಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ಕೆ ಕೈಹಾಕಿದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಅರ್ಧದಷ್ಟು ಖಾಲಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರಿನಲ್ಲಿ  ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತು ಯಾರಿಗೂ ಷರತ್ತು ಹಾಕಿಲ್ಲ. ಪಕ್ಷದ ತತ್ವ-ಸಿದ್ಧಾಂತ ಒಪ್ಪಿದರೆ ಯಾರಿಗಾದರೂ ಸ್ವಾಗತ ಮಾಡುತ್ತೇವೆ ಎಂದರು. ಸದ್ಯ ಬಿಜೆಪಿ, ಜೆಡಿಎಸ್ ಅವರ ಅಸ್ತಿತ್ವ ಕಾಪಾಡಿಕೊಳ್ಳಲಿ. ಸಚಿವ ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ನನ್ನ ಜೊತೆಗೂ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್‌ಗೆ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ‘ಸುಧಾಮ್‌ ದಾಸ್ ಅವರಿಗೆ ಕೊಡಲೇಬಾರದೆಂದು ಯಾರು ಹೇಳಿಲ್ಲ. ಬದಲಾಗಿ, ಪರಿಶೀಲಿಸಿ ಎಂದು ಪತ್ರ ಬರೆದಿದ್ದಾರೆ. ಈ ಕುರಿತು ಅಂತಿಮ ತೀರ್ಮಾನ ಹೈಕಮಾಂಡ್‌ನದ್ದು” ಎಂದು ಹೇಳಿದರು.

ಯಡಿಯೂರಪ್ಪ ಸಭೆಗೆ ಲೇವಡಿ ಮಾಡಿದ ಪ್ರಿಯಾಂಕ್ ಖರ್ಗೆ,  ಬಿಎಸ್‌ವೈರನ್ನ ಬಿಜೆಪಿಯಲ್ಲಿ ಹೇಗೆ ನಡಿಸಿಕೊಂಡರು ಎಂಬುದು ಗೊತ್ತಿದೆ. ಯಡಿಯೂರಪ್ಪರಿಗೆ ಕಣ್ಣೀರು ತರಿಸಿದ್ದು ಎಲ್ಲರೂ ನೋಡಿದ್ದಾರೆ. ಈಗ ಬಿಜೆಪಿಯಲ್ಲಿ ಕ್ಯಾಪ್ಟನ್ ಆಗೋಕೂ ಯಾರೂ ರೆಡಿ ಇಲ್ಲ. ಬಿಎಸ್‌ವೈ ಮಾತು ನಡೆಯುತ್ತಿದ್ರೆ ಬಿಜೆಪಿಯಿಂದ ಇಷ್ಟು ಜನ ಬರ್ತಿದ್ರಾ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.