ಆಪರೇಷನ್ ಹಸ್ತ

ಯೋಜನೆ ಕೊಡ್ತೀನಿ, ಕಾಂಗ್ರೆಸ್‌ಗೆ ಬಾ: ಸಿಎಂ ಸಿದ್ದರಾಮಯ್ಯ 'ಆಮಿಷ'; JDS ಶಾಸಕ ಆರೋಪ!
ನಿನ್ನ ಕ್ಷೇತ್ರಕ್ಕೆ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡ್ತೀನಿ... ಕಾಂಗ್ರೆಸ್ ಪಕ್ಷ ಸೇರು ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯೊಬ್ಬರು ಈ ರೀತಿ ವರ್ತಿಸುವುದು ಸರಿಯೇ?" ಎಂದು ಕೃಷ್ಣಪ್ಪ ಆರೋಪಿಸಿದ್ದಾರೆ.

JDS ಮುಗಿಸಲು ಕಾಂಗ್ರೆಸ್ 'ಆಪರೇಷನ್ ಹಸ್ತ'ಕ್ಕೆ ಸ್ಕೆಚ್: ಕುಮಾರಸ್ವಾಮಿ ಬಾಂಬ್
ಜೆಡಿಎಸ್ ಮುಗಿಸಬೇಕು ಎಂದು ಹೇಳಿ 12-13 ಶಾಸಕರನ್ನು ಕರೆದುಕೊಂಡು ಬನ್ನಿ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಆದರೆ, ಅದು ವರ್ಕ್ ಆಗಲ್ಲ, ಜೆಡಿಎಸ್‌ನ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.

ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿ, ಜನವರಿ ನಂತರ ಮುಂದಿನ ಪ್ರಕ್ರಿಯೆ ಆರಂಭ: ಲಕ್ಷ್ಮಣ್ ಸವದಿ
ಹಲವು 'ಅತೃಪ್ತ' ಬಿಜೆಪಿ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. 'ನಾವು ಜನವರಿ 26ರ ನಂತರ ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸುತ್ತೇವೆ. ಎಷ್ಟು ಮಂದಿ ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬುದನ್ನು ನೀವು (ಮಾಧ್ಯಮ) ನೋಡುತ್ತೀರಿ' ಎಂದು ಕಾಂಗ್ರೆಸ್ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೋಮವಾರ ಹೇಳಿದ್ದಾರೆ.

ನವೆಂಬರ್ 15ಕ್ಕೆ ಹಲವು ಜೆಡಿಎಸ್-ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ: ಡಿಸಿಎಂ ಡಿ ಕೆ ಶಿವಕುಮಾರ್
ನವೆಂಬರ್ 15ನೇ ತಾರೀಖು, ದೀಪಾವಳಿ ಮುಗಿದ ನಂತರ ಹಲವು ಜೆಡಿಎಸ್ -ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ದೆಹಲಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಬುಧವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

'ಆಪರೇಷನ್ ಹಸ್ತ'ಕ್ಕೆ ಕೌಂಟರ್: ಇಂದು ಹಾಸನಾಂಬೆ ದೇಗುಲ ಮುಂದೆ ಜೆಡಿಎಸ್ ಶಾಸಕರ ಒಗ್ಗಟ್ಟು ಪ್ರದರ್ಶನ!
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿಯಿಂದ ಪಕ್ಷದೊಳಗೆ ಕೆಲವರಲ್ಲಿ ಉಂಟಾಗಿರುವ ಅಸಮಾಧಾನ ಮತ್ತು ಕಾಂಗ್ರೆಸ್ ನಿಂದ ಆಪರೇಷನ್ ಹಸ್ತದ ಭೀತಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಸನದಲ್ಲಿ ಇಂದು ಬುಧವಾರ ಹಾಸನಾಂಬೆ ದೇಗುಲ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಪರೋಕ್ಷವಾಗಿ ತಮ್ಮ ಶಾಸಕರನ್ನು ಸೆಳೆಯಲ

ಆಪರೇಷನ್ ಹಸ್ತ ಮಾಡಿಲ್ಲ; ಬಿಜೆಪಿ- ಜೆಡಿಎಸ್‌ನ ಹಲವು ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ: ಸಿದ್ದರಾಮಯ್ಯ
ತಮ್ಮ ಪಕ್ಷವು 'ಆಪರೇಷನ್ ಹಸ್ತ'ದಲ್ಲಿ ತೊಡಗಿಲ್ಲ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.

ಸದ್ದು ಮಾಡುತ್ತಿದೆ 'ಆಪರೇಷನ್ ಹಸ್ತ': 2024ರ ಚುನಾವಣೆಗೆ ಮುನ್ನ ಬಿಜೆಪಿಯ ಹಲವು ನಾಯಕರು 'ಕೈ' ಹಿಡಿಯಲು ಸಜ್ಜು!
ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಢ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಜೆಡಿಎಸ್‌ನಿಂದ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ನಿರತವಾಗಿದೆ.

ಆರ್. ಅಶೋಕ್ ಕ್ಷೇತ್ರದಲ್ಲಿ ಆಪರೇಷನ್ ಹಸ್ತ: ಮಾಜಿ ಸಚಿವರ ಶಿಷ್ಯರು ಡಿ.ಕೆ ಬ್ರದರ್ಸ್ ತೆಕ್ಕೆಗೆ?
ಮಾಜಿ ಸಚಿವ ಆರ್.ಅಶೋಕ್ ಬೆಂಬಲಿಗರನ್ನು ಕಾಂಗ್ರೆಸ್‌ಗೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಲ್ಲಿ ಆಪರೇಷನ್ ಹಸ್ತ ನಡೆಸಿದ್ದು, ಶುಕ್ರವಾರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.

ವಿಪಕ್ಷ ನಾಯಕರು ಕಾಂಗ್ರೆಸ್ ಸೇರಲು ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ; ಎಚ್ ಡಿಕೆ- ಸಿಪಿವೈ ಒಂದಾಗುತ್ತಿರೋದು ಸಂತೋಷ: ಡಿಕೆಶಿ
ನಾನು ಕಷ್ಟಗಳನ್ನು ಸಹಿಸಿಕೊಳ್ಳಬಲ್ಲೆ ಮತ್ತು ಪಕ್ಷದೊಂದಿಗೆ ದೃಢವಾಗಿ ನಿಂತಿದ್ದೇನೆ. ಮಹಾರಾಷ್ಟ್ರದಲ್ಲಿ ಏನಾಯ್ತು? ಸಿಎಂ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿ ನಾಯಕರು ವಾಷಿಂಗ್ ಮೆಷಿನ್‌ನಲ್ಲಿ ಕೊಚ್ಚಿಹೋದರು ಎಂದು ವ್ಯಂಗ್ಯವಾಡಿದರು

