cVIGIL ಆ್ಯಪ್ ನಲ್ಲಿ 3 ಸಾವಿರಕ್ಕೂ ಅಧಿಕ ದೂರು, 161 ಕೋಟಿ ರೂ ನಗದು ವಶಕ್ಕೆ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮತದಾರರ ಸೆಳೆಯಲು ರಾಜಕೀಯ ನಾಯಕರು ಹರಸಾಹಸ ಪಡುತ್ತಿದ್ದು, ಇದರ ನಡುವೆಯೇ ಚುನಾವಣಾ ಆಯೋಗದ ಸಿವಿಜಿಲ್ ಆ್ಯಪ್ ನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಚುನಾವಣಾ ಅಕ್ರಮದ ದೂರುಗಳು ಬಂದಿವೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮತದಾರರ ಸೆಳೆಯಲು ರಾಜಕೀಯ ನಾಯಕರು ಹರಸಾಹಸ ಪಡುತ್ತಿದ್ದು, ಇದರ ನಡುವೆಯೇ ಚುನಾವಣಾ ಆಯೋಗದ ಸಿವಿಜಿಲ್ ಆ್ಯಪ್ ನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಚುನಾವಣಾ ಅಕ್ರಮದ ದೂರುಗಳು ಬಂದಿವೆ.
ಭಾರತದ ಚುನಾವಣಾ ಆಯೋಗ ಸಿವಿಜಿಲ್ (cVIGIL) ಆ್ಯಪ್ವೊಂದನ್ನು ಪರಿಚಯಿಸಿದ್ದು, ಇದರ ಮೂಲಕ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದಾಗಿದೆ. ಹೀಗೆ ಆ್ಯಪ್ ಮೂಲಕ ಇಲ್ಲಿಯವರೆಗೆ 3,147 ದೂರು ದಾಖಲಾಗಿದ್ದು, ಅದರಲ್ಲಿ 2,643 ದೂರುಗಳು ಸತ್ಯವಾಗಿವೆ ಎಂದು ಚುನಾವಣಾ ಆಯೋಗ ಹೇಳಿದೆ. ಸಿವಿಜಿಲ್ ಮೂಲಕ ಹೆಚ್ಚಿನ ದೂರುಗಳು ಅನುಮತಿಯಿಲ್ಲದೆ ಬ್ಯಾನರ್ ಅಥವಾ ಪೋಸ್ಟರ್ಗಳನ್ನು ಹಾಕುವ ಬಗ್ಗೆ ಮತ್ತು ಉಡುಗೊರೆ, ಹಣ, ಮದ್ಯ ಮತ್ತು ಆಸ್ತಿ ಹಾನಿ ಕುರಿತಾಗಿವೆ. ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ಗಳು ಮತ್ತು ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ 1,334 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 29ರಿಂದ ಏಪ್ರಿಲ್ 14ರ ತನಕ ಚುನಾವಣಾ ಅಧಿಕಾರಿಗಳು 161 ಕೋಟಿ ರೂ. ಹಣ, ಉಡುಗೊರೆ, ಮಾದಕ ವಸ್ತುಗಳನ್ನು ಮತ್ತು ಲೋಹಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ದಾಸರಹಳ್ಳಿ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಬಿಟಿಎಂ ಲೇಔಟ್ ಮತ್ತು ಮಲ್ಲೇಶ್ವರಂನಲ್ಲಿ ಚಿನ್ನ, ನಗದು ಸೇರಿದಂತೆ 25.45 ಕೋಟಿ ರೂ. ಅನ್ನು ಜಪ್ತಿ ಮಾಡಿದೆ.
ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಹೆಚ್ಚಿನ ದೂರುಗಳು ಅನುಮತಿಯಿಲ್ಲದೆ ಬ್ಯಾನರ್ / ಪೋಸ್ಟರ್ಗಳನ್ನು ಹಾಕುವ ಬಗ್ಗೆ ಮತ್ತು ಉಳಿದವು ಉಡುಗೊರೆ, ಹಣ, ಮದ್ಯ ಮತ್ತು ಆಸ್ತಿ ವಿರೂಪಗೊಳಿಸುವಿಕೆಯ ಬಗ್ಗೆ ದೂರುಗಳಾಗಿವೆ. ಫ್ಲೈಯಿಂಗ್ ಸ್ಕ್ವಾಡ್ಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಅಮೂಲ್ಯ ಲೋಹಗಳು ಮತ್ತು ಉಚಿತ ವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ 1,334 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಚಿನ್ನ, ನಗದು ಸೇರಿದಂತೆ 25.45 ಕೋಟಿ ರೂ. ಬೆಂಗಳೂರಿನ ದಾಸರಹಳ್ಳಿ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಬಿಟಿಎಂ ಲೇಔಟ್ ಮತ್ತು ಮಲ್ಲೇಶ್ವರಂನಲ್ಲಿ ಹೆಚ್ಚಿನ ಜಪ್ತಿ ಮಾಡಲಾಗಿದೆ.
ಕಾರ್ಕಳ 50 ಲಕ್ಷ ರೂ. ನಗದು ಜಪ್ತಿ
ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ನಗದನ್ನು ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಚೆಕ್ಪೋಸ್ಟ್ ಪೊಲೀಸರು ನಿನ್ನೆ (ಏ.15)ರಂದು ಜಪ್ತಿ ಮಾಡಿದ್ದರು. ದಾಖಲೆ ಇಲ್ಲದೆ ಎಸ್ಸಿಡಿಸಿಸಿ ಬ್ಯಾಂಕ್ಗೆ ಬೊಲೆರೊ ವಾಹನದಲ್ಲಿ ಹಣ ಸಾಗಿಸುತ್ತಿದ್ದರು. ಚುನಾವಣಾಧಿಕಾರಿ ಮದನ್ ಮೋಹನ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ಬ್ಯಾಂಕ್ ಲೆಟರ್ ವಶಪಡಿಸಿಕೊಂಡಿದ್ದರು. ಸಾಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


