ರಾಜ್ಯ

ದೀಪಾವಳಿ ಪಟಾಕಿ ಅವಘಡ: ಬೆಂಗಳೂರಿನಾದ್ಯಂತ 20 ಮಂದಿಗೆ ಸುಟ್ಟಗಾಯ, ಅವರಲ್ಲಿ ನೋಡುಗರೇ ಹೆಚ್ಚು!

ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸಲು ಬೆಂಗಳೂರಿಗರು ಕ್ರಮ ಕೈಗೊಂಡಿದ್ದರೂ ಭಾನುವಾರ ಮಧ್ಯರಾತ್ರಿಯವರೆಗೂ ನಗರದಲ್ಲಿ 20 ಪಟಾಕಿ ಅವಘಡ ಪ್ರಕರಣಗಳು ವರದಿಯಾಗಿವೆ.

ದೀಪಾವಳಿ ಪಟಾಕಿ ಅವಘಡ: ಬೆಂಗಳೂರಿನಾದ್ಯಂತ 20 ಮಂದಿಗೆ ಸುಟ್ಟಗಾಯ, ಅವರಲ್ಲಿ ನೋಡುಗರೇ ಹೆಚ್ಚು!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸಲು ಬೆಂಗಳೂರಿಗರು ಕ್ರಮ ಕೈಗೊಂಡಿದ್ದರೂ ಭಾನುವಾರ ಮಧ್ಯರಾತ್ರಿಯವರೆಗೂ ನಗರದಲ್ಲಿ 20 ಪಟಾಕಿ ಅವಘಡ ಪ್ರಕರಣಗಳು ವರದಿಯಾಗಿವೆ.

ಪಟಾಕಿ ಸಿಡಿತದಿಂದ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ ಎಂದು ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ಹೇಳಿದ್ದಾರೆ. ಗಾಯಾಳುಗಳ ಪೈಕಿ ಶೇ. 90 ರಷ್ಟು ಮಂದಿ ನೋಡುಗರು ಅಥವಾ ಕೆಲಸದಿಂದ ಮನೆಗೆ ಮರಳುತ್ತಿದ್ದ ಅಮಾಯಕ ನಾಗರಿಕರಾಗಿದ್ದಾರೆ. ಇದು ಆತಂಕಕ್ಕೆ ದೊಡ್ಡ ಕಾರಣ ಅಂದು ಅವರು ತಿಳಿಸಿದ್ದಾರೆ. 

ನಾರಾಯಣ ಆಸ್ಪತ್ರೆಯಲ್ಲಿನ ಆರು ಪ್ರಕರಣಗಳಲ್ಲಿ ಮೂರು ಪ್ರಕರಣಗಳು 19 ಮತ್ತು 22 ರ ನಡುವಿನ ವಯಸ್ಸಿನವರಾಗಿದ್ದರೆ, ಒಬ್ಬರು 50 ವರ್ಷದ ವ್ಯಕ್ತಿಯಾಗಿದ್ದಾರೆ.ರೋಗಿಗಳಿಗೆ ಇಂಟ್ರಾಕ್ಯುಲರ್ ರಕ್ತಸ್ರಾವವಾಗಿರುವುದರಿಂದ ಮತ್ತು ಅವರ ಕಣ್ಣುಗಳಲ್ಲಿ ಕಣಗಳು ಇದ್ದುದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ, ಅವುಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಎಲ್ಲಾ ರೋಗಿಗಳನ್ನು ಮುಂದಿನ 48 ಗಂಟೆಗಳ ಕಾಲ ನಿಗಾವಣೆ ಮಾಡಲಾಗುತ್ತಿದ್ದು, ಅವರಿಗೆ ಯಾವುದೇ ಶಾಶ್ವತ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು  ಡಾ.ರೋಹಿತ್ ತಿಳಿಸಿದ್ದಾರೆ. 

ಶಂಕರ ನೇತ್ರಾಲಯದಲ್ಲಿ  ಎರಡು ಪಟಾಕಿ ಗಾಯದ ಪ್ರಕರಣ ವರದಿಯಾಗಿದೆ. ಇದರಲ್ಲಿ ಆರು ಮತ್ತು ಏಳು ವರ್ಷದ ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ಪಟಾಕಿ ಹಚ್ಚುವುದನ್ನು ನೋಡುತ್ತಿದ್ದಾಗ ಏಳು ವರ್ಷದ ಹುಡುಗ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.