ರಾಜ್ಯ

ಬನ್ನೇರುಘಟ್ಟ: ಆನೆ ತುಳಿತಕ್ಕೆ ಬುಡಕಟ್ಟು ಸಮುದಾಯದ ಮಹಿಳೆ ಬಲಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ)ಲ್ಲಿ ಆನೆ ದಾಳಿಗೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಬನ್ನೇರುಘಟ್ಟ: ಆನೆ ತುಳಿತಕ್ಕೆ ಬುಡಕಟ್ಟು ಸಮುದಾಯದ ಮಹಿಳೆ ಬಲಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ)ಲ್ಲಿ ಆನೆ ದಾಳಿಗೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ನಾಗಮ್ಮ (45) ಆನೆ ತುಳಿತಕ್ಕೆ ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಘಟನೆ ನಡೆದ ಸ್ಥಳವು ಬನ್ನೇರುಘಟ್ಟ ಜೈವಿಕ ಉದ್ಯಾನವನದ (ಬಿಬಿಪಿ) ನಿಯಂತ್ರಣ ಮತ್ತು ನಿರ್ವಹಣೆಯಲ್ಲಿದೆ ಎಂದು ತಿಳಿದುಬಂದಿದೆ.

ಮೃತ ಮಹಿಳೆ ನಾಗಮ್ಮ ಅವರು, ಒಂದು ವರ್ಷದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿರುವ ಕುಮಾರ್ ಅವರ ತಾಯಿಯಾಗಿದ್ದಾರೆ. ಕುಮಾರ್ ಅವರು ಮೃಗಾಲಯದಲ್ಲಿರಾತ್ರಿ ವೇಳೆ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಆನೆಗಳು ಮೃಗಾಲಯದ ಪ್ರದೇಶದಲ್ಲಿ ಅಲೆದಾಡದಂತೆ ನೋಡಿಕೊಳ್ಳುವುದು ಕುಮಾರ್ ಅವರ ಕಾರ್ಯವಾಗಿದೆ.

ಘಟನೆ ನಡೆದಾಗ ನಾಗಮ್ಮ ತನ್ನ ಮಗನನ್ನು ಭೇಟಿ ಮಾಡಲು ಆಹಾರದೊಂದಿಗೆ ಅರಣ್ಯ ಪ್ರದೇಶದ ಮೂಲಕ ನಡೆದು ಬರುತ್ತಿದ್ದರು ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಡೆದಿರುವುದು ದುರದೃಷ್ಟಕರ. ಅರಣ್ಯ ಇಲಾಖೆ ಅಡಿಯಲ್ಲಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಾಗುವುಹು ಎಂದು ತಿಳಿಸಿದ್ದಾರೆ.

ಆನೆ ದಾಳಿ ನಡೆಸಿದ ಸಂದರ್ಭದಲ್ಲಿ ನಾಗಮ್ಮ ಅವರ ಜೊತೆಗೆ ಇನ್ನೂ 3-4 ಜನರಿದ್ದರು. ಆನೆ ಹತ್ತಿರ ಬರುತ್ತಿದ್ದಂತೆಯೇ ಉಳಿದವರು ತಪ್ಪಿಸಿಕೊಂಡು ಓಡಿದ್ದಾರೆ. ಆದರೆ, ನಾಗಮ್ಮ ಅವರಿಗೆ ಓಡಲು ಸಾಧ್ಯವಾಗಿಲ್ಲ. ಈ ಪ್ರದೇಶವು ಹುಲಿಗಳು ಸೇರಿದಂತೆ ಇತರೆ ವನ್ಯಜೀವಿಗಳ ನೆಲೆಯಾಗಿದ್ದು, ಆಗಾಗ್ಗೆ ಆನೆಗಳು ಅಲೆದಾಡುತ್ತಿರುತ್ತವೆ. ಸುರಕ್ಷಣಾ ಕಾರಣಗಳಿಂದಲೇ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗದಂತೆ ಎಚ್ಚರಿಕೆಗಳನ್ನು ನೀಡಲಾಗಿದೆ. ಆದರೆ, ಬುಡಕಟ್ಟು ಸಮುದಾಯದ ಜನರು ನಮ್ಮ ಸೂಚನೆಗಳನ್ನು ಪಾಲನೆ ಮಾಡುವುದಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಪಶುವೈದ್ಯ ಡಾ.ವಿಶ್ವನಾಥ್ ಅವರು ಮೃಗಾಲಯದ ಆವರಣದಲ್ಲಿ ಸಾವನ್ನಪ್ಪಿದ್ದರು. ಇದೀಗ ನಾಗಮ್ಮ ಅವರ ಸಾವು ಸಂಭವಿಸಿರುವುದು ಎರಡನೇ ಘಟನೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಸ್ಮರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.