ಬೆಂಗಳೂರು: ನಾಯಂಡಹಳ್ಳಿ–ಹೆಬ್ಬಾಳಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ
ನಾಯಂಡಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳಕ್ಕೆ ಹೆಚ್ಚುವರಿ ಬಸ್‌ಗಳ(ಮಾರ್ಗ ಸಂಖ್ಯೆ 501) ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಲ್ಪಿಸಿದೆ.

ಬೆಂಗಳೂರು: ನಾಯಂಡಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳಕ್ಕೆ ಹೆಚ್ಚುವರಿ ಬಸ್‌ಗಳ(ಮಾರ್ಗ ಸಂಖ್ಯೆ 501) ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಲ್ಪಿಸಿದೆ.
ಗುರುವಾರದಿಂದಲೇ ಬಸ್‌ಗಳು ಸಂಚಾರ ಆರಂಭಿಸಲಿವೆ. ನಾಯಂಡಹಳ್ಳಿ ಜಂಕ್ಷನ್‌ನಿಂದ ಹೊರಡುವ ಬಸ್ ನಾಗರಭಾವಿ ವೃತ್ತ, ಮಾಳಗಾಳ, ಸುಮನಹಳ್ಳಿ ಜಂಕ್ಷನ್, ಲೂರ್ದಬಾಯಿ ಸಮುದಾಯ ಭವನ, ಬಿಡಿಎ ಬಸ್ ಬೇ/ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿ, ಗೊರಗುಂಟೆಪಾಳ್ಯ, ಅಲಿಸ್ಡ್ ಫ್ಯಾಕ್ಟರಿ, ಬಿಇಎಲ್ ಸರ್ಕಲ್ ಮತ್ತು ದೇವಿನಗರ ಕ್ರಾಸ್ ಮಾರ್ಗವಾಗಿ ಈ ಬಸ್ ಗಳು ಕಾರ್ಯಾಚರಣೆ ಮಾಡಲಿವೆ.
ಇದಲ್ಲದೆ, ಕೆಂಗೇರಿ ಟಿಟಿಎಂಸಿಯಿಂದ ಕೊಮ್ಮಘಟ್ಟ ಕ್ರಾಸ್, ವಿಶ್ವೇಶ್ವರಯ್ಯ ಬಡಾವಣೆ, ಉಪಕಾರ್ ಬಡಾವಣೆ ಕ್ರಾಸ್, ಮುದ್ದಯ್ಯನಪಾಳ್ಯ ಜಂಕ್ಷನ್, ಸುಂಕದಕಟ್ಟೆ, ಪೀಣ್ಯ 2ನೇ ಹಂತದ ಮಾರ್ಗವಾಗಿ ಜಾಲಹಳ್ಳಿ ಕ್ರಾಸ್‍ಗೆ ಕಾರ್ಯಾಚರಣೆ ಮಾಡುತ್ತಿರುವ ಮಾರ್ಗ ಸಂಖ್ಯೆ 515ರಲ್ಲಿ ಹೆಚ್ಚುವರಿಯಾಗಿ ಐದು ಬಸ್‌ಗಳು ಗುರುವಾರದಿಂದ ಪರಿಚಯಿಸಲಾಗುತ್ತಿದೆ.
ಇದರಿಂದಾಗಿ ಈ ಮಾರ್ಗಗಳಲ್ಲಿ ಪ್ರತಿ 15 ನಿಮಿಷಗಳ ಅಂತರದಲ್ಲಿ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


