ನಿಯಮ ಉಲ್ಲಂಘನೆಯನ್ನು ಸರಿಪಡಿಸಿಕೊಳ್ಳಲು ರಾಜ್ಯದ ಅನಧಿಕೃತ ಶಾಲೆಗಳಿಗೆ ಕಾಲಾವಕಾಶ: ಶಿಕ್ಷಣ ಇಲಾಖೆ
ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ನಿಯಮಗಳ ಉಲ್ಲಂಘನೆಯನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ನಿಯಮಗಳ ಉಲ್ಲಂಘನೆಯನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದಲ್ಲಿ 1,600 ಅನಧಿಕೃತ ಶಾಲೆಗಳನ್ನು ಗುರುತಿಸಿದೆ. ಅವುಗಳಲ್ಲಿ 937 ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿವೆ. ಅಂತಹ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ ಎಂಬುದು ತಿಳಿದಿಲ್ಲ. ಇಲಾಖೆ ಮೂಲಗಳು ವಿದ್ಯಾರ್ಥಿಗಳು ಲಕ್ಷಗಳಲ್ಲಿರಬಹುದು ಎಂದಿವೆ.
'ನಾವು ಅಂತಹ ಶಾಲೆಗಳ ಸಮೀಕ್ಷೆಯನ್ನು ನಡೆಸಿದ್ದೇವೆ ಮತ್ತು ಡಿಎಸ್ಇಎಲ್‌ಗೆ ವರದಿಯನ್ನು ಸಲ್ಲಿಸಿದ್ದೇವೆ' ಎಂದು ಸಾರ್ವಜನಿಕ ಶಿಕ್ಷಣ ಆಯುಕ್ತ ಆರ್ ವಿಶಾಲ್ ಹೇಳಿದರು.
'ಶಾಲಾ ಶಿಕ್ಷಣಕ್ಕೆ ತೊಂದರೆ ಕೊಡಲು ಬಯಸುವುದಿಲ್ಲ'
ಬೋರ್ಡ್ ಪರೀಕ್ಷೆಯ ನಂತರ ಅಂತಹ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಇದಕ್ಕೂ ಮೊದಲು ಹೇಳಿದ್ದರು.
ಅಂತಹ ಶಾಲೆಗಳ ವಿರುದ್ಧದ ಸಾಮಾನ್ಯ ದೂರುಗಳೆಂದರೆ, ಸರ್ಕಾರದ ಸಂಯೋಜನೆಯಿಲ್ಲದೆ ತರಗತಿಗಳನ್ನು ನಡೆಸುವುದು, ಸಂಯೋಜನೆ ಕುರಿತು ಪೋಷಕರನ್ನು ತಪ್ಪುದಾರಿಗೆಳೆಯುವುದು, ಯಾವುದೇ ಅನುಮತಿಯಿಲ್ಲದ ಗ್ರೇಡ್‌ಗಳಿಗೆ ತರಗತಿಗಳನ್ನು ನಡೆಸುವುದು ಹಾಗು ಕಟ್ಟಡಗಳು ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಇಂತಹ ಶಾಲೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಒಂದಾದ ಪ್ರಮುಖ ಸಂಸ್ಥೆಯು ನಗರದಲ್ಲಿ ಮತ್ತು ಇತರೆಡೆ ಯಾವುದೇ ಸಂಯೋಜನೆಯಿಲ್ಲದ ಅನೇಕ ಶಾಖೆಗಳನ್ನು ಹೊಂದಿದೆ. ಆದರೂ, ಅದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಇಎಸ್ಇ) ನಿಂದ ಸಂಯೋಜಿತ ಎಂದು ಹೇಳಿಕೊಳ್ಳುತ್ತದೆ.
ಮೂಲಗಳ ಪ್ರಕಾರ, ಅನಧಿಕೃತ ಶಾಲೆಗಳನ್ನು ಸರಿಪಡಿಸಲು ಸಮಯ ನೀಡಲಾಗುತ್ತದೆ. 'ನಾವು ಮಕ್ಕಳ ಶಾಲಾ ಶಿಕ್ಷಣವನ್ನು ಅಡ್ಡಿಪಡಿಸಲು ಬಯಸುವುದಿಲ್ಲ. ಅಂತಹ ಶಾಲೆಗಳನ್ನು ಮುಚ್ಚುವುದು ಅಥವಾ ತರಗತಿಗಳನ್ನು ತಕ್ಷಣವೇ ನಿಲ್ಲಿಸುವುದು ಅರ್ಥವಲ್ಲ. ಏಕೆಂದರೆ, ಇದು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ನಾವು ಅವರಿಗೆ ಸಮಯವನ್ನು ನೀಡುತ್ತೇವೆ. ಇದರಿಂದ ಅವರು ತರಗತಿಗಳನ್ನು ಮುಂದುವರಿಸಲು ಅವಕಾಶ ಮಾಡಿಕೊಡಲಾಗುತ್ತದೆ' ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


