violations

Self-execution ಯೋಜನೆಗಳಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಬಿಲ್ಡರ್ಗಳಿಗೆ ಕೆ.ಜೆ ಜಾರ್ಜ್ ಖಡಕ್ ವಾರ್ನಿಂಗ್
ದೊಡ್ಡ ಪ್ರಮಾಣದ ವಸತಿ ಹಾಗೂ ವಾಣಿಜ್ಯ ಯೋಜನೆಗಳು ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಅಗತ್ಯ ವಿದ್ಯುತ್ ಮೂಲಸೌಕರ್ಯವೂ ಸಮಾನಾಂತರವಾಗಿ ನಿರ್ಮಾಣವಾಗುವಂತೆ ಮಾಡುವುದೇ ಈ ನಿಯಮದ ಉದ್ದೇಶವಾಗಿದೆ.

ಕೋಗಿಲು ಮನೆ ಧ್ವಂಸ: ಹಕ್ಕುಗಳ ಉಲ್ಲಂಘನೆ ಸಾಧ್ಯತೆ; ಸರ್ಕಾರದ ಪ್ರತಿಕ್ರಿಯೆ ಕೋರಿದ KSHRC
ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ಪರಿಶೀಲಿಸಲು ಮತ್ತು ಧ್ವಂಸ ಸಮಯದಲ್ಲಿ ಕಾನೂನು ನಿಬಂಧನೆಗಳನ್ನು ಅನುಸರಿಸಲಾಗಿದೆಯೇ ಎಂದು ನಿರ್ಧರಿಸಲು ಪ್ರಕರಣವನ್ನು ಆಯೋಗದ ತನಿಖಾ ವಿಭಾಗಕ್ಕೆ ಉಲ್ಲೇಖಿಸಲಾಗಿದೆ

ಸಾರಿಗೆ ನಿಯಮ ಉಲ್ಲಂಘನೆ: ಪರಿಣಾಮಕಾರಿ ತಪಾಸಣೆಗೆ RTO ಗೆ 40 ಹೊಸ ವಾಹನಗಳ ಹಸ್ತಾಂತರ
ರಾಜ್ಯದಲ್ಲಿ ಮೇ ಅಂತ್ಯದವರೆಗೆ ಒಟ್ಟು 3.37 ಕೋಟಿ ವಾಹನಗಳ ನೋಂದಣಿಯಾಗಿವೆ. ಅದರಲ್ಲಿ 1.24 ಕೋಟಿ ಬೆಂಗಳೂರು ನಗರದಲ್ಲಿಯೇ ಇವೆ.

ಕೇಂದ್ರದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕ ಮುಂದು
180 ದಿನಗಳಲ್ಲಿ ಕರಗುವ ಜೈವಿಕ ವಿಘಟನೀಯ ಕ್ಯಾರಿ ಬ್ಯಾಗ್ಗಳ ಬಳಕೆಗೆ ಕೇಂದ್ರ ಸರ್ಕಾರ ಪರಿಚಯಿಸಿದ ನಿಯಮಗಳನ್ನು ಅನುಸರಿಸಲು ಕೆಎಸ್ ಪಿಸಿಬಿ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ ನೀಡಿದ್ದಾರೆ.

ಘನ ತ್ಯಾಜ್ಯ ನಿಯಮ ಉಲ್ಲಂಘನೆ: 2019 ರಿಂದ ಇದುವರೆಗೆ 13 ಲಕ್ಷ ಜನರಿಗೆ ದಂಡ ವಿಧಿಸಿದ ಅಧಿಕಾರಿಗಳು!
ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗವು 2019 ರಿಂದೀಚೆಗೆ 12.96 ಲಕ್ಷ ಜನರಿಗೆ ದಂಡ ವಿಧಿಸಿದ್ದು, ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ, ಬಯಲು ಶೌಚ ಸೇರಿದಂತೆ 41.70 ಕೋಟಿ ದಂಡವನ್ನು ಸಂಗ್ರಹ ಮಾಡಿದೆ.

ಲೋಕಸಭಾ ಚುನಾವಣೆ: ಇದುವರೆಗೂ 79,000ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ದೂರು ಸ್ವೀಕಾರ; EC ಮಾಹಿತಿ
ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಸಿ-ವಿಜಿಲ್ ಆ್ಯಪ್ ಮೂಲಕ 79,000 ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ದೂರು ಸ್ವೀಕರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಬೆಂಗಳೂರು ಟೆಕ್ಕಿಗಳೇ ಹುಷಾರ್, ಸಂಚಾರ ನಿಯಮ ಅನುಸರಿಸಿ, ಇಲ್ಲವೇ ನಿಮ್ಮ ಸಂಸ್ಥೆಗೆ ದೂರು!
ನಗರದ ಟೆಕ್ಕಿಗಳೇ ಹುಷಾರ್.. ನೀವು ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವ ಮೊದಲು ಅಥವಾ ವೇಗದ ಮಿತಿ ಮೀರುವ ಮೊದಲು ಎರಡು ಬಾರಿ ಯೋಚಿಸಿ, ಏಕೆಂದರೆ ನೀವು ಯಾವುದೇ ಸಂಚಾರಿ ನಿಯಮ ಉಲ್ಲಂಘಿಸಿದ್ದರೆ ಟ್ರಾಫಿಕ್ ಪೊಲೀಸರು ಅದರ ಬಗ್ಗೆ ನೇರವಾಗಿ ನಿಮ್ಮ ಕಂಪನಿಗೆ ದೂರು ನೀಡುತ್ತಾರೆ.

ಡಿಜಿಟಲ್ ಇಂಡಿಯಾ ಮಸೂದೆ: ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿ ವರೆಗೂ ದಂಡ ಹಾಕಲು ಪ್ರಸ್ತಾವನೆ!
ಡಿಜಿಟಲ್ ಇಂಡಿಯಾ ಮಸೂದೆಯ ನಿಬಂಧನೆಗಳ ಕೆಲವು ಅಂಶಗಳು ಬಹಿರಂಗಗೊಂಡಿದ್ದು, ಸರ್ಕಾರ, ಜಾರಿಯಾಗಲಿರುವ ಈ ಕಾಯ್ದೆಯಡಿ ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿವರೆಗೂ ದಂಡ ವಿಧಿಸುವ ಪ್ರಸ್ತಾವನೆ ಹೊಂದಿದೆ.

ನಿಯಮ ಉಲ್ಲಂಘನೆಯನ್ನು ಸರಿಪಡಿಸಿಕೊಳ್ಳಲು ರಾಜ್ಯದ ಅನಧಿಕೃತ ಶಾಲೆಗಳಿಗೆ ಕಾಲಾವಕಾಶ: ಶಿಕ್ಷಣ ಇಲಾಖೆ
ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ನಿಯಮಗಳ ಉಲ್ಲಂಘನೆಯನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

