ಬೆಂಗಳೂರು: 90 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶ
ಮಾದಕ ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 90 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸ್ಥಳದಲ್ಲಿ ನಾಶಪಡಿಸಲಾಗಿದೆ.

ಬೆಂಗಳೂರು: ಮಾದಕ ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 90 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸ್ಥಳದಲ್ಲಿ ನಾಶಪಡಿಸಲಾಗಿದೆ.
ನಾಶಪಡಿಸಿದ ಮಾದಕವಸ್ತುಗಳನ್ನು ಅಕ್ಟೋಬರ್ 2022 ಮತ್ತು ಮಾರ್ಚ್ 2023 ರ ನಡುವೆ ನಗರದಾದ್ಯಂತ ಪೊಲೀಸ್ ಠಾಣಾ ಮಿತಿಗಳಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.
ಈ ಮಾದಕ ವಸ್ತುಗಳನ್ನು ಸುಪ್ರೀಂಕೋರ್ಟ್ ಮತ್ತು ಔಷಧ ವಿಲೇವಾರಿ ಸಮಿತಿಯ ನಿರ್ದೇಶನದಂತೆ ದಾಬಸ್‌ಪೇಟೆಯ ನಿಗದಿತ ಸ್ಥಳದಲ್ಲಿ ನಾಶಪಡಿಸಲಾಗಿದೆ.
4,110 ಕೆಜಿ ಗಾಂಜಾ, 11 ಕೆಜಿ ಗಾಂಜಾ ಆಯಿಲ್, 22 ಕೆಜಿ ಆಶಿಷ್ ಆಯಿಲ್, 8 ಕೆಜಿ ಅಫೀಮ್, 5.5 ಕೆಜಿ ಚರಸ್, 62.7 ಕೆಜಿ ಎಂಡಿಎಂಎ ಪೌಡರ್, 8073 ಟ್ಯಾಬ್ಲೆಟ್ ಸೇರಿದಂತೆ 90 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಗದಿಯಾಗಿದ್ದ ದಾಬಸ್‍ಪೇಟೆಯ ಕೈಗಾರಿಕಾ ಸ್ಥಳದಲ್ಲಿ ದಹನಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


