ಹಿಂದಿವಾಲಿಗೆ ಚಳಿ ಬಿಡಿಸಿದ ಕನ್ನಡಿಗ ಆಟೋ ಚಾಲಕ; ವಿಡಿಯೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಗೆ ಕನ್ನಡ ಭಾಷೆ ಗೊತ್ತಿರಲ್ಲ, ಸ್ಥಳೀಯರಿಗೆ ಹಿಂದಿ ಬರಲ್ಲ, ಇದೇ ವಿಚಾರವಾಗಿ ಆಗಾಗ್ಗೆ ಜಗಳ ಸರ್ವೇ ಸಾಮಾನ್ಯವಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಗೆ ಕನ್ನಡ ಭಾಷೆ ಗೊತ್ತಿರಲ್ಲ, ಸ್ಥಳೀಯರಿಗೆ ಹಿಂದಿ ಬರಲ್ಲ, ಇದೇ ವಿಚಾರವಾಗಿ ಆಗಾಗ್ಗೆ ಜಗಳ ಸರ್ವೇ ಸಾಮಾನ್ಯವಾಗಿದೆ.
ಇದೇ ರೀತಿ 'ನಾನೇಕೆ ಕನ್ಮಡ ಮಾತನಾಡಬೇಕು? ಹಿಂದಿಯಲ್ಲಿ ಮಾತನಾಡಿ ಎಂದ ಯುವತಿಗೆ ಆಟೋ ಚಾಲಕರೊಬ್ಬರು ಚಳಿ ಬಿಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಕನ್ನಡ ಪರ ಹೋರಾಟಗಾರರು ಸೇರಿದಂತೆ ಅನೇಕ ಕನ್ನಡಿಗರು ಬೆಂಬಲ ಸೂಚಿಸುತ್ತಿದ್ದರೆ, ಮತ್ತೆ ಕೆಲವರು ಆಟೋ ಚಾಲಕನ ವರ್ತನೆ ಸರಿಯಲ್ಲ ಎಂದಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ, ಪ್ರತಿ ಕನ್ನಡಿಗನಲ್ಲಿ ಈ ಕೆಚ್ಚು ಬರಬೇಕು, ದುರಹಂಕಾರ ತೋರುವವರಿಗೆ ಪಟ್ಟು ಬಿಡದೆ ಇದೇ ರೀತಿ ಬುದ್ದಿ ಹೇಳಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


