ಮಂಗಳೂರು: ಮುಂಜಾನೆ ತ್ರಾಣ ಇರುವ ತನಕ ಹೋರಾಡಿ ಗೆದ್ದು ಬಾ ಗೆಳೆಯಾ; ಫಸ್ಟ್ ನೈಟ್ಗೆ ಶುಭ ಕೋರಿದ ಬ್ಯಾನರ್ ವೈರಲ್!
ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭಹಾರೈಸುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ.

ಮಂಗಳೂರು: ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭಹಾರೈಸುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ.
ಹೀಗೆ ಮದುವೆಯ ಮೊದಲ ರಾತ್ರಿಗೆ ವಿಶ್ ಮಾಡಿ ಬ್ಯಾನರ್ ಅಳವಡಿಸಿರೋದು ಮಂಗಳೂರಿನಲ್ಲಿ. ಅದು ಕೂಡಾ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್‌ಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ.
ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ಇದನ್ನು ಜಸ್ಟ್ ಫಾರ್ ಫನ್ ಎಂದು ತಗೊಂಡ್ರೆ, ಮತ್ತೆ ಕೆಲವರು ಇವತ್ತಿನ ಯುವಜನರ ಮನಸ್ಥಿತಿಯನ್ನು ಟೀಕಿಸುತ್ತಿದ್ದಾರೆ, ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನೋಡಿ ಜನರು ಇದು ತಮಾಷೆಯಲ್ಲ, ಸಾರ್ವಜನಿಕ ಪ್ರದೇಶದಲ್ಲಿ ಇಂಥಾ ಹೋರ್ಡಿಂಗ್ ಹಾಕಿಸಿರೋದು ಸರಿಯಲ್ಲ ಎಂದು ಟೀಕಿಸಿದ್ದಾರೆ.
'ನಮ್ಮ ಮುಗ್ಧ ಗೆಳೆಯ, ರಸಿಕ ಇಂದಿನ ಮದುಮಗ ಸುದರ್ಶನ್ ಇವರ ಮದುವೆ ನಂತರದ ಪ್ರಪ್ರಥಮ ಗಿಲಿಗಿಲಿ ಆಟ, ಮೊದಲ ರಾತ್ರಿಯ ಸಂಭ್ರಮ ದಿನಾಂಕ, 12 ಜೂನ್, ಕೆಪಿಟಿ ಮನೆಯಲ್ಲಿ, ಸಮಯ ರಾತ್ರಿ 12 ಗಂಟೆಯಿಂದ' ಎಂದು ಬರೆಸಲಾಗಿದೆ. ಮಾತ್ರವಲ್ಲ. ಮುಂಜಾನೆ ತ್ರಾಣ ಇರುವ ತನಕ ಎದ್ದು ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯ, ನಿಮ್ಮ ಪ್ರಪ್ರಥಮ ರಾತ್ರಿಗೆ ಶುಭಕೋರುವ ಸುದರ್ಶನ್ ಅಭಿಮಾನಿ ಬಳಗ, ಕುಡ್ಲ, ಕತಾರ್, ದುಬೈ, ಕೀನ್ಯಾ, ಶ್ರೀಲಂಕಾ ಎಂದು ಹಾಕಿಸಲಾಗಿದೆ. ಫೋಟೋದ ಕೆಳಗಡೆ ಆಲ್ ದಿ ಬೆಸ್ಟ್ ಫಾರ್ ಯುವರ್ ಫಸ್ಟ್ ಮ್ಯಾಚ್ ಎಂದು ಸಹ ಹಾಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


