ಬೆಂಗಳೂರು: ಉದ್ಯಮಿಯ ವಿವರ ಬಳಸಿ ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚಿಸಿದ ನಾಲ್ವರ ಬಂಧನ
ಉದ್ಯಮಿಯೊಬ್ಬರ ಪಾನ್ ಕಾರ್ಡ್ ಮತ್ತು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಖ್ಯೆಯನ್ನು ಅವರಿಗೆ ತಿಳಿಯದಂತೆ ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದ ನಾಲ್ವರನ್ನು ಸೈಬರ್ ಕ್ರೈಂ ಠಾಣೆಯ...

ಬೆಂಗಳೂರು: ಉದ್ಯಮಿಯೊಬ್ಬರ ಪಾನ್ ಕಾರ್ಡ್ ಮತ್ತು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಖ್ಯೆಯನ್ನು ಅವರಿಗೆ ತಿಳಿಯದಂತೆ ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದ ನಾಲ್ವರನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ತಮಿಳುನಾಡಿನ ಜಿ ದೆಹಲಿ ಬಾಬು, ಆರ್ ಜಾನಕಿ ರಾಮ್ ರೆಡ್ಡಿ, ಹಿರೆಲಾಲ್ ಮತ್ತು ತೇಜ್ ರಾಜ್ ಗಿರಿಯಾ ಎಂದು ಗುರುತಿಸಲಾಗಿದ್ದು, ಮೂವರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಹಮೀದ್ ರಿಜ್ವಾನ್ ಅವರು 2011 ರಿಂದ ಎಆರ್‌ಎಸ್ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಅವರು ಟ್ರೇಡರ್ ಐಡೆಂಟಿಫಿಕೇಶನ್ ನಂಬರ್(ಟಿಐಎನ್) ಹೊಂದಿದ್ದರು. ಆದರೆ 2013ರಲ್ಲಿ ವ್ಯವಹಾರವನ್ನು ನಿಲ್ಲಿಸಿದ್ದರು ಮತ್ತು ಇದು ಹಮೀದ್ ರಿಜ್ವಾನ್ ಅವರು 2018 ರಲ್ಲಿ ಸಲ್ಲಿಸಿದ ದೂರಿಗೆ ಸಂಬಂಧಿಸಿದ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, 2017 ರಲ್ಲಿ GST ಪರಿಚಯಿಸಲಾಯಿತು. ಅವರು TIN ನಿಂದ GSTಗೆ ಬದಲಾದರು. 2017-18ರಲ್ಲಿ ಜಿಎಸ್‌ಟಿ ಪಾವತಿ ಮಾಡದಿದ್ದಕ್ಕಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡರು ಮತ್ತು ರಿಜ್ವಾನ್ ಅವರು ತಮ್ಮ ಸಂಸ್ಥೆಯು 2013 ರಿಂದ ಯಾವುದೇ ವಹಿವಾಟು ನಡೆಸಿಲ್ಲ ಎಂದು ಹೇಳಿದೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಜ್ವಾನ್ ಅವರು ಅಪರಿಚಿತ ವ್ಯಕ್ತಿಗಳು ತಮ್ಮ ಪ್ಯಾನ್ ಮತ್ತು ಜಿಎಸ್‌ಟಿ ನಂಬರ್ ಬಳಸಿ ತೆರಿಗೆ ವಂಚಿಸುತ್ತಿದ್ದುದನ್ನು ಮನಗಂಡು ಪೊಲೀಸರಿಗೆ ದೂರು ನೀಡಿದ್ದರು. “ಅವರ ದೂರಿನ ಆಧಾರದ ಮೇಲೆ, ಆರು ವರ್ಷಗಳ ನಂತರ ನಾಲ್ವರನ್ನು ಬಂಧಿಸಲಾಗಿದೆ. ಅವರು 2016-17ರಿಂದ ರಿಜ್ವಾನ್ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ರಿಜ್ವಾನ್‌ನ ಪ್ಯಾನ್ ಕಾರ್ಡ್ ಮತ್ತು ಜಿಎಸ್‌ಟಿ ನಂಬರ್ ಬಳಸಿ ಬ್ಯಾಂಕ್ ಖಾತೆ ತೆರೆದಿದ್ದು, ಜಿಎಸ್‌ಟಿ ಪಾವತಿಸುತ್ತಿರಲಿಲ್ಲ. ಹಲವು ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದಾರೆ. ನಾವು ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಸೇರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


